ಮಣ್ಣು ಆರೋಗ್ಯ ಚೀಟಿಯ ಬಳಕೆ ಕುರಿತು ತರಬೇತಿ ಕಾರ್ಯಕ್ರಮ

0

ಬೆಳಗಾವಿ.ನ,.17: ಬೆಳಗಾವಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬೆಳಗಾವಿ ಇವರ ವತಿಯಿಂದ ಇತ್ತಿಚಿಗೆ ಮಣ್ಣು ಆರೋಗ್ಯ ಚೀಟಿಯ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ತಾಲೂಕಿನ ಮಜಗಾಂವ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಅಧಿಕಾರಿಗಳಾದ ಶ್ರೀಮತಿ ವಜ್ರೇಶ್ವರಿ ಕುಲಕರ್ಣಿ ಅವರು ಮಣ್ಣು ರೈತರ ಜೀವಾಳ, ಅದನ್ನು ಸಂರಕ್ಷಿಸಿಕೊಂಡು ಆರೋಗ್ಯಯುತ ಮಣ್ಣನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವಿಜ್ಞಾನಿ ಎಸ್‍ಎನ್ ಎಕ್ಕೇಲಿ ಅವರು, ಪೋಷಕಾಂಶಗಳ ನಿರ್ವಹಣೆ ಹಾಗೂ ಮಣ್ಣು ಆರೋಗ್ಯ ಚೀಟಿಗಳ ವಿಶ್ಲೇಷಣೆ ಮಾಡಿ ಫಲವತ್ತತೆ ಕಾಯ್ದುಕೊಳ್ಳುವ ಕ್ರಮಗಳನ್ನು ತಿಳಿಸಿದರು.

ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ರಾಜಶೇಖರ ಭಟ್ಟ ಅವರು ಮಣ್ಣಿನ ಆರೋಗ್ಯವನ್ನು ಕಾಪಾಡಲು ರೈತರು ಅನುಸರಿಸಬೇಕಾದ ಕ್ರಮಗಳು. ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಹಾಗೂ ಸಾವಯವ ಪರಿಕರಗಳ ಬಳಕೆಯ ಕುರಿತು ಉಪನ್ಯಾಸ ನೀಡಿದರು.

ಗ್ರಾಮದ ಮಣ್ಣು ಮಾದರಿಗಳ ವಿಶ್ಲೇಶಣೆ ಮಾಡಿ ಕಾರ್ಡಗಳನ್ನು ಪೂರೈಸಿದ ಸಂಸ್ಥೆಯ ಮುಖ್ಯಸ್ಥರಾದ ನೇಮಿನಾಥ ಚೌಗಲಾ ಅವರು ಮಾದರಿ ತೆಗೆದ ಕ್ರಮ, ವಿಶ್ಲೇಷಣೆ ಮಾಡಿದ ವಿಧ, ಹಾಗೂ ಅಂಶಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಗ್ರಾಮದ ಹಿರಿಯ7 ಹಾಗೂ ಪ್ರಗತಿಪರ ರೈತರೂ ಸೇರಿದಂತೆ 50 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.