ಅಥಣಿ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ

0
ಅಥಣಿ ನ 17 : ಅಥಣಿಯ ಕುಕನೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಟ್ಟಡವನ್ನು  ಸಚಿವ ಪ್ರಭು ಚವ್ಹಾಣ್ ಪರಿಶೀಲನೆ ನಡೆಸಿದರು. ಕಟ್ಟಡದ ಕಾಮಗಾರಿಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನುದಾನದ ಕೊರತೆಯಿಂದ ಆಗಿ ಎರಡನೇ ಹಂತದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಇಲಾಖೆಯಿಂದ ಅನುದಾನ ಒದಗಿಸಿದ್ದೆಯಾದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭ ಮಾಡಬಹುದು ಎಂದು ಎಂದು
ಸಚಿವರಿಗೆ ಡಿನ್ ಎನ್ ಎ ಪಾಟೀಲ್ ತಿಳಿಸಿದರು.
ಬಾಕಿ ಉಳಿದ ಕಟ್ಟಡದ ಕಾಮಗಾರಿಗಳನ್ನು ಆದಷ್ಟು ತ್ವರಿತಗತಿಯಲ್ಲಿ ಮುಗಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಅಲ್ಲದೆ ಅಗತ್ಯ ಅನುದಾನ ಬಿಡುಗಡೆ ಗೊಳಿಸುವಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗು ತಿಳಿಸಿದರು.
ಭೇಟಿಯ ಸಂಧರ್ಭದಲ್ಲಿ ಡೀನ್ ಎನ್.ಎ ಪಾಟೀಲ್, ಉಪಮುಖ್ಯಮಂತ್ರಿ ಲಕ್ಷಣ ಸವದಿ ಅವರ ಪುತ್ರ ಚಿದಾನಂದ, ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.