ನ. 18 ರಂದು 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ

0

ಬೆಳಗಾವಿ, ನ. 17 : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ. ಬೆಂಗಳೂರು ಇವರುಗಳ ನೇತೃತ್ವದಲ್ಲಿ “67ನೇ ಅಖಿಲ ಭಾರತ ಸಹಕಾರ ಸಪ್ತಾಹ” ವನ್ನು ನವೆಂಬರ್ 18 (ಬುಧವಾರ) ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಡದ ಡೇರಿ ಆವರಣ ಮಹಾಂತೇಶ ನಗರದಲ್ಲಿ ಆಯೋಜಿಸಲಾಗಿದೆ.

“ವ್ಯವಹಾರ ಉದ್ಯೋಗ ಕಳೆದುಕೊಂಡವರು ಬಾಧಿತರು ಪುನರುದ್ಯೋಗಸ್ಥಾರಗಲು ಕೌಶಲ್ಯಾಭಿವೃದ್ಧಿ” ದಿನದ ವಿಷಯವಾಗಿದೆ.
ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಕ್ಷೀರ ಸಾಗರ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ರಾಜ್ಯ ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ ನೀರಾವರಿ) ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸಹಕಾರ ಧ್ವಜಾರೋಹಣ ಮತ್ತು ನಂದಿನಿ ವಿಶೇಷ ಉತ್ಪನಗಳ ಬಿಡುಗಡೆ ಮಾಡುವರು.

ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನೆರವೇರಿಸುವರು. ಕರ್ನಾಟಕ ಹಾಲು ಮಹಾಮಂಡಳಿದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.

ರಾಜ್ಯ ಪಶು ಸಂಗೋಪನೆ ಮತ್ತು ಔಕಫ್ ಸಚಿವರಾದ ಪ್ರಭು ಚವ್ಹಾಣ್ ಅವರು ಸಾಧಕರಿಗೆ ಸನ್ಮಾನಿಸಿ, ಗೌರವಿಸುವರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಹಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಕ್ಷೀರ ಸಂಜೀವಿನಿ ಉದ್ಘಾಟಿಸುವರು.

ರಾಜ್ಯ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರಾದ ಶ್ರೀಮಂತ ಪಾಟೀಲ ಅವರು ಹಾಲು ಉತ್ಪಾದಕರ ಸಂಘಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಕ್ಕೆ ಚಾಲನೆ ನೀಡುವರು.
ವಿಧಾನ ಪರಿಷತ್ ಶಾಸಕರು ಹಾಗೂ ಬೆಳಗಾ ಹಾಲು ಒಕ್ಕೂಟ ಅಧ್ಯಕ್ಷರಾದ ವಿವೇಕ ವಸಂತರಾವ ಪಾಟೀಲ ಅವರು ರಾಸುಗಳ ವಿಮಾ ಪಾಲಿಸಿ ವಿತರಿಸುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ, ವಿಧಾನ ಸಭೆ ಉಪಸಭಾಧ್ಯಕ್ಷರಾದ ವಿಶ್ವನಾಥ ಮಾಮನಿ, ನವದೆಹಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಕುಡಚಿ ಮತಕ್ಷೇತ್ರ ಶಾಸಕರಾದ ಪಿ.ರಾಜೀವ ಸೇರಿದಂತೆ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಅಥಣಿ ಮತಕ್ಷೇತ್ರದ ಶಾಸಕರಾದ ಮಹೇಶ ಕುಮಠಳ್ಳಿ ಅವರು ಭಾಗವಹಿಸುವರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಶಾಸಕರು ಸೇರಿದಂತೆ ಎಲ್ಲ ಗಣ್ಯರು ಉಪಸ್ಥಿತರಿರುವರು.

 

ಕಾರ್ಯಕ್ರಮಗಳು:

ಗೋ ಪೂಜೆ, ಸಹಕಾರ ಧ್ವಜಾರೋಹಣ, ಸಹಕಾರ ಧ್ವಜಗೀತೆ, ಸಹಕಾರ ಪ್ರತಿಜ್ಞೆ, ಸುಗಮ ಸಂಗೀತ, ವಿಶೇಷ ಉಪನ್ಯಾಸ, ಸಹಕಾರಿ ಪಿತಾಮಹ ಶ್ರೀ ಸಿದ್ದನಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪ್ರಾರ್ಥನೆ, ಸ್ವಾಗತ ಹಾಗೂ ಸನ್ಮಾನ, ಪ್ರಾಸ್ತಾವಿಕ ಭಾಷಣ, ಸಮಾರಂಭದ ಉದ್ಘಾಟನೆ

ಹಾಗೂ ಉದ್ಘಾಟನಾ ಭಾಷಣ, ಕ್ಷೀರ ಸಾಗರ ವಿಶೇಷ ಉತ್ಪನ್ನಗಳ ಬಿಡುಗಡೆ, ನಂದಿನಿ ವಿಶೇಷ ಉತ್ಪನ್ನಗಳ ಬಿಡುಗಡೆ, ಸಾಧಕರಿಗೆ ಸನ್ಮಾನ, ಕ್ಷೀರ ಸಂಜೀವಿನಿ ಉದ್ಘಾಟನೆ, ಹಾಲು ಉತ್ಪಾದಕರ ಸಂಘಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಕ್ಕೆ ಚಾಲನೆ, ರಾಸುಗಳ ವಿಮಾ ಪಾಲಿಸಿ ವಿತರಣೆ, ಮುಖ್ಯ ಅಥಿತಿಗಳ ಭಾಷಣ, ಅಧ್ಯಕ್ಷರ ಭಾಷಣ ಸೇರಿದಂತೆ ವಂದನಾರ್ಪಣೆ.