ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ; ಬಿಜೆಪಿ ಮುಖಂಡ ಶಿವಲಿಂಗಯ್ಯ ಅಲ್ಲಯ್ಯನವರಮಠ. ಮಹಾ ಡಿಸಿಎಂ ಹೇಳಿಕೆ ಖಂಡನೀಯ….

0

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ; ಬಿಜೆಪಿ ಮುಖಂಡ ಶಿವಲಿಂಗಯ್ಯ ಅಲ್ಲಯ್ಯನವರಮಠ.
ಮಹಾ ಡಿಸಿಎಂ ಹೇಳಿಕೆ ಖಂಡನೀಯ….

ಬೆಳಗಾವಿ : ಬೆಳಗಾವಿ ಕರ್ನಾಟಕದ್ದು, ಸೂರ್ಯ-ಚಂದ್ರರಿರುವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಬಿಜೆಪಿ ಯುವ ಮುಖಂಡ ಶಿವಲಿಂಗಯ್ಯ ಅಲ್ಲಯ್ಯನವರಮಠ ಹೇಳಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಖಂಡನೀಯ. ಅನಗತ್ಯ ಗೊಂದಲವನ್ನುಂಟು ಮಾಡುವ ಉದ್ದೇಶದಿಂದ ಅವರು ಅಂತಹ ಹೇಳಿಕೆಗಳನ್ನು ನೀಡುತ್ತಿ ರಾಜ್ಯದ ಯಾವುದೇ ಭಾಗದ ಬಗ್ಗೆಯೂ ಕ್ಯಾತೆ ತೆಗೆಯುವ ಅಗತ್ಯವಿಲ್ಲ ಎಂದರು.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿನ್ನೆ ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು. ಅಖಂಡ ಮಹಾರಾಷ್ಟ್ರಾ ಠಾಕ್ರೆ ಅವರ ಕನಸಾಗಿತ್ತು ಎಂದಿದ್ದರು. ಮಹಾ ಡಿಸಿಎಂ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.