ಕರ್ನಾಟಕದಲ್ಲಿ ಕನ್ನಡ ಭಾಷೆಗೆ, ಆಗ್ರಸ್ಥಾನ ಸಿಗಬೇಕು,ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ,ಆಗಬೇಕೆಂದು ಕನ್ನಡದ ಅಭಿಮಾನಿಯೊಬ್ಬ ಆಂದ್ರದ ಕಾಂಚಿನಪಳ್ಳಿಯಿಂದ ಪಾದಯಾತ್ರೆ

0

ಬೆಳಗಾವಿ- ಕರ್ನಾಟಕದಲ್ಲಿ ಕನ್ನಡ ಭಾಷೆಗೆ, ಆಗ್ರಸ್ಥಾನ ಸಿಗಬೇಕು,ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ,ಆಗಬೇಕೆಂದು ಕನ್ನಡದ ಅಭಿಮಾನಿಯೊಬ್ಬ ಆಂದ್ರದ ಕಾಂಚಿನಪಳ್ಳಿಯಿಂದ ಪಾದಯಾತ್ರೆ ಮಾಡುತ್ತ ಬೆಳಗಾವಿಗೆ ಬಂದಿದ್ದಾನೆ

ಕಳೆದ 20 ದಿನಗಳಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಿರುವ ಈ ಅಪ್ಪಟ ಕನ್ನಡದ ಅಭಿಮಾನಿ ,ಹಳದಿ ಕೆಂಪು ಬಣ್ಣದ ಬಟ್ಟೆ ಧರಿಸಿ,ಜೈ ಕರ್ನಾಟಕ,ಜೈ ಭುವನೇಶ್ವರಿ,ಜೈ ಕನ್ನಡ ಎಂಬ ಫಲಕ ಹೊತ್ತುಕೊಂಡಿರುವ ಈ ಅಭಿಮಾನಿ ನಿಪ್ಪಾಣಿಯವರೆಗೂ ಪಾದಯಾತ್ರೆ ನಡೆಸಿ,ಕನ್ನಡದ ಜಾಗೃತಿ ಮೂಡಿಸಲಿದ್ದಾನೆ.

ಚಿಕ್ಕಬಳ್ಳಾಪೂರದ ಕೆಎಂಎಫ್ ಡೈರಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ ತಿಪ್ಪಣ್ಣಾ ಬದ್ರಶೆಟ್ಟಿ ,ಕರ್ನಾಟಕದಲ್ಲಿ ಕನ್ನಡದ ಬಗ್ಗೆ,ಕನ್ನಡಿಗರ ಬಗ್ಗೆ ಕೀಳಾಗಿ ನೋಡುವ ಪರಿಸ್ಥಿತಿ ಎದುರಾಗಿದೆ.ಇದು ನಿಲ್ಲಬೇಕು,ಕನ್ನಡಕ್ಕಾಗಿ ಏನಾದ್ರೂ ಮಾಡಬೇಕು ಎನ್ನುವ ಹಂಬಲ ನನ್ನದಾಗಿದೆ. ಬೆಂಗಳೂರಿನಲ್ಲಿ ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿಲಿದ್ದೇನೆ ಎಂದು ಭದ್ರಶೆಟ್ಟಿ ಹೇಳಿದರು

ಈ ಅಪ್ಪಟ ಕನ್ನಡದ ಅಭಿಮಾನಿ ಮೂಲತಹ ಶಿಗ್ಗಾಂವ ನಗರದವರಾಗಿದ್ದಾರೆ. ಬೆಳಗಾವಿಗೆ ಆಗಮಿಸಿದ ಈ ಕನ್ನಡದ ಅಭಿಮಾನಿಯನ್ನು ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ,ಅಶೋಕ ಚಂದರಗಿ ಅವರು ಸಮ್ಮಾನಿಸಿ ಗೌರವಿಸಿದರು