ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಬೇರೆ ಹಿರಿಯ ನಾಯಕರಿಗೆ ಮನೆ ಹಾಕುವ ಸಾಧ್ಯತೆ

0

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಘಟಿಸಲಿದ್ದು ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿ ವರಿಷ್ಠರ ಭೇಟಿ ಮಾಡಿ ಸಂಭಾವ್ಯ ಸಚಿವರ ಪಟ್ಟಿ ಸಲ್ಲಿಸಿದ್ದಾರೆ. ಬಾಕಿ ಇರುವ 12 ಸಚಿವ ಸ್ಥಾನಗಳಲ್ಲಿ 9 ಜನ ಸಚಿವರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಕೆಲವೊಂದು ಸಚಿವರನ್ನು ಸಂಪುಟದಿಂದ ಕೈಬಿಡುವಲ್ಲಿ ಸಿ.ಎಂ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಹಾಗಾದರೆ ಬೆಳಗಾವಿ ಈ ಇಬ್ಬರು ಸಚಿವರು ಸಂಪುಟದಿಂದ ಹೊರಗೆ ನಡೆಯುತ್ತಾರಾ ಎಂ‌ಬ ಅನುಮಾನ ದಟ್ಟವಾಗಿದೆ.

ಹೌದು ಸಧ್ಯಕ್ಕೆ ಬೆಳಗಾವಿ ರಾಜ್ಯ ಆಡಳಿತದಲ್ಲಿ ಪ್ರಭವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ನಾಲ್ಕು ಸಚಿವಸ್ಥಾನ ಹಾಗೂ ಒಂದು ಡಿಸಿಎಂ ಹುದ್ದೆ ಕೂಡಾ ಹೊಂದಿದೆ.

ಇದರ ಹೊರತಾಗಿ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಬೇರೆ ಹಿರಿಯ ನಾಯಕರಿಗೆ ಮನೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಮುಖ್ಯಮಂತ್ರಿ ಸಂಪುಟದಿಂದ ಕೈಬಿಡಲು ಆಸಕ್ತಿ ತೋರಿರುವ ಆ ಇಬ್ಬರು ಸಚಿವರು ಯಾರು ಅಂತಿರಾ..?

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ವಲಸೆ ಬಂದು ಮಂತ್ರಿಯಾದ, ಅಲ್ಪಸಂಖ್ಯಾತ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಅವರನ್ನು ಕೈಬಿಡಬಹುದು. ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೈ ಬೀಡಲಾಗಬಹುದು ಎನ್ನಲಾಗುತ್ತಿದೆ.

ಇಲ್ಲಿಯವರೆಗೆ ಈ ಇಬ್ಬರು ಸಚಿವರಿಂದ ಇಲಾಖೆಗಳಲ್ಲಿ ಅಷ್ಟೊಂದು ಪರಿಣಾಮಕಾರಿ ಕೆಲಸ ಆಗದೇ ಇರುವುದಕ್ಕೆ ಮುಖ್ಯಮಂತ್ರಿ ಈ ಸಚಿವರ ಬದಲಾವಣೆ ನಿರ್ಧಾರಕ್ಕೆ ಬಂದಿರಬಹುದು ಎನ್ನುತ್ತವೆ ಬಲ್ಲ ಮೂಲಗಳು.

 

ಸಧ್ಯದ ಕ್ಯಾಬಿನೆಟ್ ನಲ್ಲಿ ಬೆಂಗಳೂರು ಹೊರತುಪಡಿಸಿದರೆ ಸರ್ಕಾರದ ಹೆಚ್ಚು ಖಾತೆಗಳು ಬೆಳಗಾವಿ ಪಾಲಾಗಿವೆ. ಇನ್ನೂ ಹಿರಿಯ ಶಾಸಕರ ಕೋಟಾದಲ್ಲಿ ಶಾಸಕ ಉಮೇಶ್ ಕತ್ತಿ ಸಚಿವಸ್ಥಾನ ಪಡೆಯುವುದು ನಿಶ್ಚಿತವಾಗಿದ್ದು, ರಾಜ್ಯ ಆಡಳಿತಾತ್ಮಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ. ಈ ಇಬ್ಬರು ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟದಿಂದ ಕೈಬಿಡಬಹುದು ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.

ಒಂದು ವೇಳೆ ಸಚಿವ ಸಂಪುಟ ಪುನರ್ ರಚನೆಯನ್ನು ಬಿ ಎಸ್ ವೈ ಕೈಬಿಟ್ಟಿದ್ದೆ ಆದರೆ, ಬೆಳಗಾವಿಗೆ ಮತ್ತೊಂದು ಸಚಿವಸ್ಥಾನ ಸಿಗಲಿದ್ದು ಆಡಳಿತಾತ್ಮಕವಾಗಿ ಜಿಲ್ಲೆ ಪ್ರಭಲವಾಗುವುದರಲ್ಲಿ ಎರಡು ಮಾತಿಲ್ಲ.