ಪಿಎಸ್ಐ ಶಿವಾನಂದ ಗುಡಗೇನಟ್ಟಿ ಇವರಿಗೆ ಮುಖ್ಯಮಂತ್ರಿ ಪದಕ

0

ಬೆಳಗಾವಿ : ಪಿಎಸ್ಐ ಶಿವಾನಂದ ಗುಡಗೇನಟ್ಟಿ ಇವರಿಗೆ ಮುಖ್ಯಮಂತ್ರಿ ಪದಕ ಸಬ್ ಇನ್ಸ್ಪೆಕ್ಟರ್ ಹುಕ್ಕೇರಿ ಪೊಲೀಸ್ ಠಾಣೆಯ ರವರು ಪೊಲೀಸ್ ಇಲಾಖೆಗೆ 2010 ನೇ ಸಾಲಿನಲ್ಲಿ ಸೇರ್ಪಡೆಗೊಂಡಿರುತ್ತಾರೆ.

ಸದರಿ ಶ್ರೀಯುತರು ಸನ್ 2018 ನೇ ಸಾಲಿನಲ್ಲಿ ಬೆಂಗಳೂರ ನಗರ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಶ್ರಮ ವಹಿಸಿ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಿದ್ಧಹಸ್ತರಾಗಿರುತ್ತಾರೆ.

ದರೋಡೆಗೆ ಯತ್ನ, ಸುಲಿಗೆ ಸರ ಅಪಹರಣ, ಕಳವು ಪ್ರಕಾರಾಣ ಮುಂತಾದ ಪ್ರಕರಣಗಳಲ್ಲಿ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ತಮ್ಮ ಕಾರ್ಯ ವೈಖರಿ ನೈಪುಣ್ಯತೆಯನ್ನು ಪ್ರದರ್ಶಿಸಿದ್ದು 4.6ಕೆ ಜಿ ತೂಕದ ಚಿನ್ನದ ಆಭರಣಗಳನ್ನು ಹಾಗೂ ವಿವಿಧ ಮಾದರಿಯ 17 ದ್ವಿಚಕ್ರವಾಹನಗಳನ್ನು ವಶಪಡಿಕೊಳ್ಳುವಲ್ಲಿ ಯಶಶ್ವಿಯಾಗಿ ಕಾರ್ಯನಿರ್ವಹಿಸಿದ್ದು ಮತ್ತು ಪ್ರಸ್ತುತ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅವರ ಜನಪರ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ನೀಡಿರುತ್ತಾರೆ.

ಸದರಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿಯು ಕೂಡ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ರೌಡಿ ಗಳ ಬೆವರಿಸಿದ ಪಿಎಸ್ಐ ಶಿವಾನಂದ ಗುಡಗನಟ್ಟಿ ಸಾಹೇಬ್ರು ಜೀಪ್ ಬಂದ್ರೆ ಗಲಾಟೆ ಮಾಡುವ ಜನ ಯರ್ರಾ ಬಿರ್ರ್ರಿ ಓಡಿ ಹೋದ ಘಟನೆ ಹುಕ್ಕೇರಿಯಲ್ಲಿ ಸಾಕಷ್ಟು ನಡೆದಿದೆ. ಯಾಪ್ಪಾ ಹಿಂತಾ ಸಾಹೇಬ್ರನ್ನು ನಾನು ನೋಡಿಲ್ಲ ಎಂದು ಯಾಕೆಂದ್ರೆ ತಪ್ಪು ಮಾಡಿದ್ರೆ ಯಾರ್ರನ್ನು ಬಿಡಲ್ಲ ಈ ಪಿಎಸ್ಐ ಎಂದು ಅಲ್ಲಲ್ಲಿ ಸಾರ್ವಜನಿಕರು ಮಾತನಾಡುತ್ತಿದ್ದರು.

ಇವರು ಪೊಲೀಸ್ ಇಲಾಖೆಗೆ ಮಾಡಿರುವ ಕೆಲಸ ಅಷ್ಟಿಷ್ಟಲ್ಲ ಹಗಲಿರುಳು ಕರ್ತವ್ಯ ನಿರ್ವಹಿಸಿ ಪ್ರಕರಣಕ್ಕೆ ಆರೋಪಿಗಳಿಗಳನ್ನು ಹಿಡಿಯಲು ತಮ್ಮದೇ ಆದ ಛಾಪು ಮೂಡಿಸಿದ್ರ್ರು ಸರಕಾರ ಹಿಂತಹ ಪಿಎಸ್ಐ ಗಳನ್ನ ಗುರುತಿಸಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಪಿಎಸ್ಐ ಏನಂದ್ರೆ ಈ ಪದಕ ಲಬಿಸಬೇಕಾದರೆ ರೆಟೈಡ ಸಮಯ ಬೇಕಾಗುತ್ತೆ ಆದರೆ ನಾವು ಮಾಡುವ ಕೆಲಸ ದೇವರ ಕೆಲಸ ಎಂದು ಮಾಡಿದರೆ ತಾನಾಗಿಯೇ ದೇವರು ಅದಕ್ಕೊಂದು ಪ್ರಶಸ್ಥಿ ಇಟ್ಟೆ ಇರುತ್ತಾನೆ.

ಎಂದು ಉದಾಹರಣೆ ನಮ್ಮ ಪಿಎಸ್ಐ ಗುಡಗನಟ್ಟಿ ಸಾಹೇಬ್ರು ಠಾಣೆಯಲ್ಲಿ ಅಷ್ಟೇ ಸಾಮಾಜಿಕ ಹಾಗೂ ಸಾರ್ವಜನಿಕ ಕಳಕಳಿ ಪಿಎಸ್ಐ ನಿಮಗೆ ಇನ್ನು ಉತ್ತರ ಕರ್ನಾಟಕ ಭಾಷೆ ಯಲ್ಲಿ ಹೇಳಬೇಕೆಂದರೆ ಬೇಕಾದವರು ಸ್ಟೇಶನ್ ಗೆ ಬರ್ಲಿ ನ್ಯಾಯ ಕೊಡಿಸೊ ದೇವರು ಎಂದು ಹುಕ್ಕೇರಿ ಜನ ನೆನಪಿಸ್ತಾರೆ. ಇನ್ನು ಮುಂದೆ ಶಿವಾನಂದ ಗುಡಗನಟ್ಟಿ ಸಾಹೇಬ್ರು ಪ್ರಧಾನಿ ನರೇಂದ್ರ ಮೋಧಿ ಯವರ ಪ್ರಶಸ್ತಿಗೆ ಆಯ್ಕೆ ಹಾಗುವ ಹಾಗೆ ಕೆಲಸ ಮಾಡಲಿ ಎಂದು ಸಾರ್ವಜನಿಕರು ನಮ್ಮ ಪತ್ರಿಕೆ ಮುಂದೆ ಮಾತನಾಡಿದ್ದಾರೆ.

ಇನ್ನು ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಹಾಗೂ ಪ್ರಸ್ತುತ ಎಸ್ಪಿ ಲಕ್ಷ್ಮಣ ನಿಂಬರಗಿ ಯವರು ಗುಡಗೇನಟ್ಟಿ ಸಾಹೇಬ್ರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ.

ಇನ್ನು ಹೆಚ್ಚಿನ ಪೋಸ್ಟ್ ಗೆ ಹೋಗಿ ಸಮಾಜದ ಶಾಂತಿ ಪಾಲನೆಗೆ ಹಾಗೂ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲಿ ಎಂದು ಹುಕ್ಕೇರಿ ತಾಲೂಕಿನ ಹಾಗೂ ಜಿಲ್ಲೆಯ ಎಲ್ಲ ಸಿಬ್ಬಂದಿ ಸಾರ್ವಜನಿಕರು.ಶ್ಲಾಘಿಸಿದ್ದಾರೆ.