ಕನ್ನಡಪರ ಸಂಘಟನೆಗಳಲ್ಲೂ ಮರಾಠಾ, ಕಾರ್ಯಕರ್ತರಿದ್ದಾರೆ.- ಶಾಸಕ ಅನೀಲ ಬೆನಕೆ

0

ಕನ್ನಡಪರ ಸಂಘಟನೆಗಳಲ್ಲೂ ಮರಾಠಾ, ಕಾರ್ಯಕರ್ತರಿದ್ದಾರೆ.-ಅನೀಲ ಬೆನಕೆ

ಬೆಳಗಾವಿ- ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ವಿರೋಧಿಸಿ ಬಂದ್‌ಗೆ ಕರೆ ವಿಚಾರವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು

ಕರ್ನಾಟಕ ಬಂದ್‌ಗೆ ಕರೆ ನೀಡಿದ ಸಂಘಟನೆಗಳಲ್ಲೇ ಮರಾಠಾ ಸಮುದಾಯದವರಿದ್ದಾರೆ, ಮರಾಠಾ, ಮರಾಠಿ ಮಧ್ಯದ ವ್ಯತ್ಯಾಸ ಸಂಘಟನೆಗಳು ತಿಳಿದುಕೊಳ್ಳಲಿ,ಎಂದು ಬೆನಕೆ ಹೇಳಿದ್ರು…

ಕನ್ನಡ ಮಾತನಾಡುವ ಹಲವರು ಮರಾಠಾ ಸಮುದಾಯದಲ್ಲಿ ಇದ್ದಾರೆ, ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿದ್ದಾರೆ,

ಕನ್ನಡಪರ ಸಂಘಟನೆಗಳಲ್ಲೂ ಮರಾಠಾ ಸಮುದಾಯ ಕಾರ್ಯಕರ್ತರಿದ್ದಾರೆಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ, ನಿನ್ನೆ ಸಿಎಂ‌ ಬಿಎಸ್‌ವೈ ಭೇಟಿಯಾಗಿ ಅಭಿನಂದನೆ ಮಾಡಿದ್ದೇವೆ ಎಂದರು.

ಮರಾಠಾ ಸಮುದಾಯದಲ್ಲಿರುವ ಕನ್ನಡಿಗರಿಗೆ ಅನ್ಯಾಯ ಆಗಬಾರದು,ಮರಾಠಾ ಸಮುದಾಯದೊಳಗೆ ಎಂಇಎಸ್‌ ಇದೆ, ಅದು ಒಂದು ಸಂಘಟನೆ, ಬೆಳಗಾವಿಯ ಕ್ಷತ್ರಿಯ ಮರಾಠಾ ಪರಿಷತ್‌ನವರು ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ,ಮರಾಠಿಗರು ಕನ್ನಡ ಭಾಷೆ ಒಪ್ಪಿಕೊಂಡಿದ್ದಾರೆ,

ಕೆಲವರಷ್ಟೇ ಒಪ್ಪಿಕೊಂಡಿಲ್ಲ, ಎಂಇಎಸ್ ಸಂಘಟನೆಯೇ ಬೇರೆ ಮರಾಠಾ ಸಮುದಾಯವೇ ಬೇರೆ,ಎಂಇಎಸ್‌ನವರು ಸಹ ಈ ನಿಗಮಕ್ಕೆ ವಿರೋಧ ವ್ಯಕ್ತಪಡಿಸಬಾರದು,

ಎಂಇಎಸ್‌ನವರು ಮರಾಠಾ ನಿಗಮ ವಿರೋಧಿಸಿದ್ರೆ ಅವರೂ ಸಹ ಮರಾಠಿಗರಿಗೆ ಅನ್ಯಾಯ ಮಾಡಿದಂತೆ,ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಎಂಈಎಸ್ ಗೆ ತಿರಗೇಟು ನೀಡಿದ್ರು