ಡಾ. ಜಿನದತ್ತ ದೇಸಾಯಿ ಅವರಿಗೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ

0

ಬೆಳಗಾವಿ 22- ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಇವರು 2019-2020 ನೇ ಸಾಲಿನ ಸಾಹತ್ಯ ಪ್ರಶಸ್ತಿಗಳಿಗಾಗಿ ಆಯ್ಕೆ ಸಮಿತಿಯು ಇದೇ

ದಿ. 15 ರಂದು ಧಾರವಾಡದಲ್ಲಿ ಹಿರಿಯ ಸಾಹಿತಿಗಳಾದ ಡಾ. ಜಿ. ಎಂ. ಹೆಗಡೆರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಸಭೆ ಸೇರಿ ಬೇರೆ ಬೇರೆ ಕ್ಷೇತ್ರಗಳ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಲಾಯಿತು.,

2019 ನೇ ಸಾಲಿನ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಕಾವ್ಯ ಕ್ಷೇತ್ರಕ್ಕೆ ಕೊಡುವ ಪ್ರಶಸ್ತಿಗೆ ಡಾ. ಜಿನದತ್ತ ದೇಸಾಯಿಯವರು ಆಯ್ಕೆಯಾಗಿದ್ದಾರೆ. ಸದರಿ ಪ್ರಶಸ್ತಿಯು ರೂ. 51,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.

ಡಾ. ದೇಸಾಯಿಯವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ 2017 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುಮಾರು 20 ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಇವರು ಹಲವಾರು ಸಂಪಾದನಾ ಕೃತಿಗಳನ್ನು ಹೊರತಂದಿದ್ದಾರೆ. ಡಾ. ಜಿನದತ್ತರ ಬದುಕು ಬರಹ ಕುರಿತಂತೆ 6 ಕೃತಿಗಳು ಹೊರಬಂದಿವೆ.

ಇವರನ್ನು ಡಾ. ಬಸವರಾಜ ಜಗಜಂಪಿ, ಪ್ರೊ. ಎಂ. ಎಸ್. ಇಂಚಲ, ಆರ್. ಬಿ. ಕಟ್ಟಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಲ್. ಎಸ್. ಶಾಸ್ತ್ರಿ, ಪಿ. ಬಿ. ಸ್ವಾಮಿ, ಅಶೋಕ ಮಳಗಲಿ, ಎಂ. ಎ. ಪಾಟೀಲ ಹಾಸ್ಯಕೂಟದ ಗುಂಡೇನಟ್ಟಿ

ಮದುಕರ, ಪ್ರೊ. ಜಿ. ಕೆ. ಕುಲಕರ್ಣಿ, ಅರವಿಂದ ಹುನಗುಂದ, ಜಿ. ಎಸ್. ಸೋನಾರ, ಎಂ.ಬಿ. ಹೊಸಳ್ಳಿ, ಡಾ. ಜಿನದತ್ತ ದೇಸಾಯಿ ಅವರನ್ನು ಅಭಿನಂದಿಸಿದ್ದಾರೆ.