ಬೆಳಗಾವಿ: ವಾಹನ ಮಾಲೀಕರ ಪರವಾನಗಿಯ ಸ್ಮಾರ್ಟ್ ಕಾರ್ಡನ್ನು ಮನೆ-ಮನೆಗೆ ತಲುಪಿಸುವ ಉದ್ದೇಶದಿಂದ ಆರ್ ಟಿಓನಲ್ಲಿ ಶ್ವಾಶತ ಅಂಚೆ ಪ್ರಾರಂಬಿಸಿಲಾಗಿದೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.
ನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್. ಟಿ. ಓ) ನೂತನವಾಗಿ ಅಂಚೆ ಶಾಖೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ,
ಕೋರಾನಾ ಸಂದಿಗ್ಧ ಸ್ಥಿತಿಯಲ್ಲಿ ಆರ್ಟಿಓ ಅಧಿಕಾರಿ, ಸಿಬ್ಬಂದಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಲ್ಲಿನ ಯಮನಾಪೂರ ಹಾಗೂ ಕಲಬರ್ಗಿಯಲ್ಲಿ ಪ್ರಾದೇಶಿಕ ಕಚೇರಿ ನಿರ್ಮಾಣಕ್ಕೆ ಏಂಟು ಏಕರೆ ಜಾಗ ಮಂಜೂರಾಗಿದೆ. ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ಮಾತನಾಡಿ, ಅಂಚೆ ಮೂಲಕ ವಾಹನ ದಾಖಲಾತಿ ಸ್ಮಾರ್ಟ್ನ್ನು ನೇರವಾಗಿ ಮನೆಗೆ ತಲುವ ಉದ್ದೇಶ ಇದಾಗಿದೆ. ಅಂಚೆ ಅಧಿಕಾರಿಗಳ ಸಹಕಾರದಿಂದ ಇವೆಲ್ಲವೂ ಸಾದ್ಯ. ಇದರಿಂದ ಗೊಂದಲ ತಪ್ಪಿಸಬಹುದಾಗಿದೆ.
ವಾಹನ ಮಾಲಿಕರ ಅಲೆದಾಟ ತಪ್ಪಿಸಲು ಒಂದೆ ಸೂರಿನಡಿಯಲ್ಲಿ ವಾಹನ ಸಮಸ್ಯೆ ಇತ್ಯರ್ಥಗೊಳಿಸುವ ಉದ್ದೇಶದಿಂದ ಯಮನಾಪೂರದಲ್ಲಿ ಪ್ರಾದೇಶಿಕ ಹಾಗೂ
ಕಣಬರ್ಗಿ ಗ್ರಾಮದಲ್ಲಿ ಡ್ರಾವ್ಹಿಂಗ್ ಲೈಸನ್ಸ್ ಕೊಡುವದಕ್ಕಾಗಿಯೇ ಟೆಸ್ಟ್ ಮಾಡಲು ಸುಸಜ್ಜಿತವಾದ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. 823 ಲಕ್ಷ ರೂ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಶೇ 80 ರಷ್ಟು ಕೆಲಸ ಮುಗಿದಿದೆ. ಇದಕ್ಕಾಗಿ ಏಂಟು ಎಕರೆ ಜಾಗ ಮಿಸಲಿದೆ ಒಟ್ಟು 16 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ಮೇಲ್ದರ್ಜೆಗೆರಲಿವೆ ಎಂದರು.
ಯುವ ಪೀಳಿಗೆಗೆ ಗುಣಮಟ್ಟದ ವಾತಾವರಣ ನೀಡಬೇಕೆಂದರೆ ಪೂರ್ವಜರ ಈ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಂಡು ಹೋಗಬೇಕಿದೆ. ಈ ವಾಹನಗಳು ವೀಪರಿತ ಹೊಗು ಸೂಸುವ ದರಿಂದ ವಾಯು ಮಾಲಿನ್ಯ ವಾಗುತ್ತಿದೆ. ಇದನ್ನು ನಿಯಂತ್ರಿಸುವ ಕಾರ್ಯವಾಗಬೇಕಿದೆ, ಶುದ್ದ ಗಾಳಿ ಕಲುಷಿತಗೊಂಡರೆ ನಮಗೆ ಕೆಡು, ಈ ಅಮೂಲ್ಯ ಸಂಪತ್ತನ್ನು ಕಾಯ್ದುಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಮನೆಗೊಂದು ಮರ ಬೆಳೆಸಿ ಎಂದರು.
ಸಹಾಯಕ ಅಂಚೆ ಅಧಿಕಾರಿ ಆರ್ ಕೆ ಉಮರಾಣಿ, ಎಸ್ ಕೆ ಹುಗ್ಗಿ ಸ್ವಾಗತಿಸಿದರು. ಸುಜಯ ಕುಲಕರ್ಣಿ ನಿರೂಪಿಸಿದರು. ಶೀತಲ ಕುಲಕರ್ಣಿ ವಂದಿಸಿದರು. ಯಶಸ್ಸಿ ಫ್ರಾಂಚೈಸಿ ಚಿದಾನಂದ ಕಮರಂತ ಹಾಗೂ ಇತರರು.