ಪಂಡರಾಪುರ ಕ್ಷೇತ್ರಕ್ಕೆ ದಿಂಡಿ,ಪಾಲಕಿ ಹಾಗೂ ಸಾರ್ವಜನಿಕ ಭಕ್ತಾಧಿಗಳ ಪ್ರವೇಶ ನಿಷೇಧ

0

ಬೆಳಗಾವಿ, ನ.23 : ಸೊಲ್ಲಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು ಕರೋನಾ ವೈರಾಣುವಿನ ಹರಡುವಿಕೆಯ ನಿಯಂತ್ರಣಕ್ಕಾಗಿ ಪ್ರಸಕ್ತ ಸಾಲಿನ ಕಾರ್ತಿಕ ಶುದ್ಧ ಏಕಾದಶಿ ನಿಮಿತ್ತ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರ ಶ್ರೀ ಕ್ಷೇತ್ರಕ್ಕೆ, ಸಾರ್ವಜನಿಕ ಭಕ್ತಾಧಿಗಳ ಆಗಮನವನ್ನು ನವೆಂಬರ್ 24 ರಿಂದ ನವೆಂಬರ್ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಅಪರಾಧ ದಂಡ ಸಂಹಿತೆ 144 ರನ್ವಯ ನಿಷೇದಾಜ್ಞೆ ಹಾಗೂ ಬಾಂಬೆ ಪೋಲೀಸ್ ಕಾಯ್ದೆ ಕಲಂ 37 ರನ್ವಯ ನಿರ್ಭಂಧ ಜಾರಿ ಮಾಡಿ ಆದೇಶಿಸಿದ್ದಾರೆ. ಜಿಲ್ಲೆಯಿಂದ ಹೊರಡುವಂತಹ ದಿಂಡಿಗಳ ಮತ್ತು ಪಾಲಕಿಗಳೊಂದಿಗೆ ಆಗಮಿಸುವ ಸಾರ್ವಜನಿಕ ಭಕ್ತಾಧಿಗಳ ಪ್ರವೇಶವನ್ನು ನಿರ್ಬಂಧಿಸಿರುವದರಿಂದ ಭಕ್ತಾಧಿಗಳು ಸಹಕರಿಸಲು ಕೋರಿರುತ್ತಾರೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಸಮಸ್ತ ಸಾರ್ವಜನಿಕ ಭಕ್ತಾಧಿಗಳು ಹಾಗೂ ದಿಂಡಿಗಳ ಮತ್ತು ಪಾಲಕಿಗಳ ಆಯೋಜಕರುಗಳು ಕಾರ್ತಿಕ ಶುದ್ಧ ಏಕಾದಶಿ ನಿಮಿತ್ತ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರದ ಶ್ರೀ ಕ್ಷೇತ್ರಕ್ಕೆ ಪ್ರಯಾಣಿಸದಿರಲು ಜಿಲ್ಲಾಧಿಕಾರಿ ಎಂ.ಜಿ ಹೀರೆಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.