ಅರ್ಜಿ ಆಹ್ವಾನ

0

ಗುರುಶಿಷ್ಯ ಪರಂಪರೆ ಯೋಜನೆ: ಅರ್ಜಿ ಆಹ್ವಾನ

ಬೆಳಗಾವಿ, ನ.25 : ಸಾಮಾನ್ಯ ಯೋಜನೆಯಡಿ ಗುರುಶಿಷ್ಯ ಪರಂಪರೆ ಯೋಜನೆಯನ್ನು 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಅವಕಾಶ ಮಾಡಿಕೊಳ್ಳಲಾಗಿದ್ದು ಗುರುಶಿಷ್ಯ ಪರಂಪರೆ ಯೋಜನೆಯು ಮೂರು ತಿಂಗಳ ತರಬೇತಿಯಾಗಿದ್ದು ಆಸಕ್ತ ತರಬೇತಿದಾರರು ನವೆಂಬರ 28 ರೊಳಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.
ತರಬೇತಿದಾರರು 5ನೇ ತರಗತಿ ಪಾಸಾಗಿರಬೇಕು ಹಾಗೂ ಕನಿಷ್ಠ 18 ರಿಂದ 35 ವರ್ಷದೊಳಗಿನವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0831-2474649 ಗೆ ಸಂಪರ್ಕಿಸಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////

ಕೆ.ಎಸ್.ಆರ್.ಪಿ, ಉತ್ಸವ: ಡಿಸೆಂಬರ 2 ರಂದು ಸೈಕಲ್ ಜಾಥಾ

ಬೆಳಗಾವಿ, ನ.25  : ಕೆ.ಎಸ್.ಆರ್.ಪಿ ಉತ್ಸವ ಪ್ರಯುಕ್ತ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 2 ನೇ ಪಡೆಯ ಬೆಳಗಾವಿ ಘಟಕದ ವತಿಯಿಂದ ಸೈಕಲ್ ಜಾಥಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೆ.ಎಸ್.ಆರ್.ಪಿ, ಉತ್ಸವ ಪ್ರಯುಕ್ತ ಡಿಸೆಂಬರ್ 2 ರಂದು ಬೆಳಿಗ್ಗೆ 7:30 ಗಂಟೆಗೆ ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಜಾಥಾದಲ್ಲಿ ಕೆ.ಎಸ್.ಆರ್.ಪಿ ಬೆಳಗಾವಿ ನಗರ/ಜಿಲ್ಲಾ ಪೊಲೀಸ್ ತರಬೇತಿ ಶಾಲೆಗಳು ಹಾಗೂ ಬೆಳಗಾವಿ ನಗರದ ಸಾರ್ವಜನಿಕರು ಸಹ ಭಾಗವಹಿಸಲಿದ್ದಾರೆ.

ಸೈಕಲ್ ಜಾಥಾ ಸುವರ್ಣ ಸೌಧದಿಂದ ಹೊರಟು ಎನ್.ಎಚ್-4 ಮಾರ್ಗವಾಗಿ ಅಶೋಕವೃತ್ತ, ಆರ್.ಟಿ.ಓ ವೃತ್ತ, ರಾಣಿ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಣೆ ಮಾಡಿ, ಕಾಲೇಜ ರಸ್ತೆ, ಉದ್ಯಮಬಾಗ ರೋಡ್ ಹಾಗೂ ಪೀರನವಾಡಿ ಮಾರ್ಗವಾಗಿ ಕೆ.ಎಸ್.ಆರ್.ಪಿ, 2 ನೇ ಪಡೆ, ಬೆಳಗಾವಿಗೆ ಬಂದು ತಲುಪುವುದು.
ಸೈಕಲ್ ಜಾಥಾವನ್ನು ಸಧೃಡ ಆರೋಗ್ಯ ಮತ್ತು ಫಿಟ್ ಬೆಳಗಾವಿ ಎಂಬ ಉದ್ದೇಶದಿಂದ ಹಮ್ಮಿಕೊಂಡಿದ್ದು ಕೆ.ಎಸ್.ಆರ್.ಪಿ ಉತ್ಸವ ಮತ್ತು ಸೈಕಲ್ ಜಾಥಾದ 2 ದಿನದ ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿರುವವರು.

ಸಾಂಸ್ಕøತಿಕ ಕಾರ್ಯಕ್ರಮ:
ಅದೇ ರೀತಿ ಡಿಸೆಂಬರ್ 1 ರಂದು ಸಾಯಂಕಾಲ 7 ರಿಂದ 9 ಗಂಟೆಯವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೆ.ಎಸ್.ಆರ್.ಪಿ.ಯ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೆ.ಎಸ್.ಆರ್.ಪಿ 2 ನೇ ಪಡೆಯ ಕಮಾಂಡೆಂಟ ಹಂಜಾ ಹುಸೇನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯಡಿ ಅರ್ಜಿ ಆಹ್ವಾನ

ಬೆಳಗಾವಿ, ನ.25 : ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯಡಿ 2020-21ನೇ ಸಾಲಿನ ಮುಕ್ತ ನಿಧಿ ಶೇ. 29 ಹಾಗೂ 2016-17, 2017-18, 2018-19 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ.24, ಶೇ.5 ರಡಿ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2020-21 ನೇ ಸಾಲಿನ ಎಸ್.ರ್ಎಸಿ ಮುಕ್ತನಿಧಿ ಶೇ. 7.25 ರಡಿ ಇತರ ಬಡ ಜನಾಂಗದ ಮನೆಗಳಿಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವದು, ಶೇ. 5 ರಡಿ ವಿಕಲಚೇತನರಿಗೆ ಮೂರು ಚಕ್ರದ ವಾಹನ ನೀಡುವುದು ಹಾಗೂ 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ .29 ರಡಿ ಎಸ್.ಸಿ ಸಮುದಾಯದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದು ಪದವಿಧರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪೆÇ್ರೀತ್ಸಾಹ ಧನ ನೀಡುವುದು.
2016-17 , 2017-18 ನೇ ಸಾಲಿನ ಶೇ .24.10 ರ ಅನುದಾನದಡಿ ಪ.ಜಾತಿ ಜನಾಂಗದ ಮನೆಗಳಿಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವುದು, 2018-19 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ.24.10 ರ ಅನುದಾನದಡಿ ಪರಿಶಿಷ್ಟ ಜಾತಿ ಜನಾಂಗದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದು.
2016-17, 2017-18, 2018-19 ಹಾಗೂ 2020-21 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ.24.10 ರ ಅನುದಾನದಡಿ ಪ.ಪಂಗಡ ಜನಾಂಗದ ಫಲಾನುಭವಿಗಳಿಗೆ ಜೀವ ವಿಮೆ ಮಾಡಿಸುವುದು ಹಾಗೂ 2020-21 ನೇ ಸಾಲಿನ ಪಟ್ಟಣ ಪಂಚಾಯತ ಸ್ಥಳೀಯ ನಿಧಿ ಶೇ.24.10, ಶೇ.7.25 ರಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ನೀಡುವುದು, ಶೇ.5 ರ ಅನುದಾನದಡಿ ವಿಕಲಚೇತನರಿಗೆ ವಾಕರ್ ಸ್ಟಿಕ್ ನೀಡುವುದು.
ಎಲ್ಲ ವೈಯಕ್ತಿಕ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಫಲಾನುಭವಿಗಳು ಡಿಸೆಂಬರ್ 15 ರೊಳಗಾಗಿ ಪಟ್ಟಣ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು.
ಈಗಾಗಲೇ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದು ಒಂದು ವೇಳೆ ಅರ್ಜಿ ಸಲ್ಲಿಸಿದಲ್ಲಿ ತಿರಸ್ಕರಿಸಲಾಗುವುದು. ಅದರಂತೆ ಅರ್ಹ ಫಲಾನುಭವಿಗಳು ಅರ್ಜಿಗೆ ಲಗತ್ತಿಸಬೇಕಾದ ದಾಖಲೆಗಳ ಬಗ್ಗೆ ಪಟ್ಟಣ ಪಂಚಾಯತಿ ಕಚೇರಿ ನೊಟೀಸ್ ಬೋರ್ಡಿನಲ್ಲಿ ವಿವರವಾಗಿ ನಮೂದಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ಪಟ್ಟಣ ಪಂಚಾಯತ ವಿಷಯ ನಿರ್ವಾಹಕರಿಂದ ಪಡೆಯಬಹುದಾಗಿದೆ ಎಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಪ್ರÀಕಟಣೆಯಲ್ಲಿ ತಿಳಿಸಿದ್ದಾರೆ.////

ಕೆ.ಎಸ್.ಆರ್.ಪಿ ನಿರ್ಗಮನ ಪಥಸಂಚಲನ ಕಾರ್ಯಕ್ರಮ

ಬೆಳಗಾವಿ, ನ.25 : ಕರ್ನಾಟಕ ರಾಜ್ಯ ಮೀಸಲು ಪೋಲಿಸ 6 ನೇ ತಂಡದ ಪುರುóಷರ ವಿಶೇಷ ಮೀಸಲು ಪೋಲಿಸ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ವತಿಯಿಂದ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಡಿಸೆಂಬರ 1 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೆ.ಎಸ್.ಆರ್.ಪಿ ತರಬೇತಿ ಶಾಲೆ, ಕಂಗ್ರಾಳಿಯಲ್ಲಿ ನಡೆಯಲಿದೆ.
ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಉಪಸ್ಥಿತಿಯಲ್ಲಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್‍ಪೆಕ್ಟರ್ ಜನರಲ್ ಆಫ್ ಪೋಲಿಸ್ ಪ್ರವೀಣ ಸೂದ್ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿರುವವರು./////