1 ಮರ ಕಡಿದ ವ್ಯಕ್ತಿಗೆ 3 ಸಾವಿರ ದಂಡ ವಿಧಿಸಿ, 30 ಗಿಡ ನೆಡುವ ಕಾಯಕವನ್ನು ಸ್ಟೀಲ್ ಅಂಗಡಿ ಮಾಲೀಕನಿಗೆ ನೀಡಿದ್ದಾರೆ.

0

ರಾಯಚೂರು : ವನಸಿರಿ ಫೌಂಡೇಷನ್ ತಂಡ 1 ಮರ ಕಡಿದ ವ್ಯಕ್ತಿಗೆ 3 ಸಾವಿರ ದಂಡ ವಿಧಿಸಿ, 30 ಗಿಡ ನೆಡುವ ಕಾಯಕವನ್ನು ರಾಯಚೂರು ಜಿಲ್ಲೆಯ ಗಣೇಶ ಸ್ಟೀಲ್ ಅಂಗಡಿ ಮಾಲೀಕನಿಗೆ ನೀಡಿದ್ದಾರೆ.

ವನಸಿರಿ ಫೌಂಡೇಶನ್ ರಾಯಚೂರು ಹಾಗೂ ದುದ್ದುಪುಡಿ  ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಗುರುವಾರ ವಾರ್ಡ್ ನಂಬರ್ 19 ರ ಲಕ್ಷ್ಮಿ ನಗರದಲ್ಲಿ ಗಿಡ ನೆಡಲಾಯಿತು.

ರಂಭಾಪುರಿ ಶಾಖಾಮಠದ ಸೋಮನಾಥ ಶಿವಚಾರ್ಯರು, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರಿ, ತಿಮ್ಮರೆಡ್ಡಿ ಹುಡಾ, ಮಲ್ಲನಗೌಡ ಮಲ್ಕಾಪುರ, ಚಿದಾನಂದ, ಸೋಮಶೇಖರ ಸ್ವಾಮೀ, ಪ್ರದೀಪ್ ಪೂಜಾರ್ ಸೇರಿದಂತೆ ಇತರರು ಇದ್ದರು.