ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

0

ಬೆಳಗಾವಿ  2/25-ಸಿಒವೈ ಕೆಎಆರ್-ಬಿಎನ್-ಎನ್‍ಸಿಸಿ-ಬೆಳಗಾವಿ ದಿನಾಂಕ 24-11-2020 ರಂದು ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಬೆಳಗಾವಿ ಹಾಗೂ 25-ಬಿಎನ್ ಕೆಎಆರ್ ಎನ್‍ಸಿಸಿ ಬೆಳಗಾವಿ ಮತ್ತು 2/25-ಸಿಒವೈ ಎನ್‍ಸಿಸಿಯವರ ಸಹಯೋಗದೊಂದಿಗೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಮಹಾವಿದ್ಯಾಲಯದ ಎನ್‍ಸಿಸಿ ಅಧಿಕಾರಿಗಳಾದ ಲೆ. ಡಾ.ಎಸ್.ಎಮ್. ಬುಲಬುಲೆ ಅವರು ಅತಿಥಿಗಳಾದ ಕರ್ನಲ್ ಕೆ. ಶ್ರೀನಿವಾಸ,ಗ್ರುಪ್ ಕಮಾಂಡರ್ ಗ್ರುಪ್ ಬೆಳಗಾವಿ ಹಾಗೂ ಕರ್ನಲ್ ಅಭಯ ಆವಸ್ತಿ, ಸಿಒ 25 ಕೆಎಆರ್ ಬಿಎನ್ ಎನ್‍ಸಿಸಿ ಬೆಳಗಾವಿ ಅವರನ್ನು ಸ್ವಾಗತಿಸಿದರು.

ರಕ್ತದಾನ ಶಿಬಿರವನ್ನು ಕರ್ನಲ್ ಕೆ. ಶ್ರೀನಿವಾಸ ಹಾಗೂ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.(ಶ್ರೀಮತಿ) ಜ್ಯೋತಿ ಎಸ್. ಕವಳೇಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಟ್ಟು ಐದು ಮಹಾವಿದ್ಯಾಲಯಗಳು ಭಾಗಿಯಾಗಿದ್ದವು. 15 ಕ್ಕೂ ಹೆಚ್ಚು ಕೆಡೆಟ್‍ಗಳು, 10 ಎ.ಎನ್.ಒ.ಗಳು, ಪಿ ಆಯ್. ಸಿಬ್ಬಂದಿಗಳು ರಕ್ತದಾನ ಮಾಡಿದರು.

ಪ್ರಸ್ತುತ ಕೋವಿಡ್ 19 ಸಂದರ್ಭದಲ್ಲಿಯೂ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಲ್ ಕೆ. ಶ್ರೀನಿವಾಸ ಹಾಗೂ ಕರ್ನಲ್ ಅಭಯ ಆವಸ್ತಿ ಅವರು ಶಿಬಿರವನ್ನು ಕುರಿತು ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ ತಾವೂ ರಕ್ತದಾನ ಮಾಡುವ ಮೂಲಕ ಉಳಿದವರಿಗೆ ಮಾದರಿಯಾದರು. ಪ್ರತಿವರ್ಷ ಇಂಥ ಶಿಬಿರವನ್ನು ಆಯೋಜಿಸುವಂತೆ ಮಾರ್ಗದರ್ಶನ ಮಾಡಿದರು.