ಧಾರವಾಡ : ಕಳ್ಳರು ಮತ್ತು ಪೊಲೀಸರ ಮಧ್ಯೆ ಜಂಗ್ಲಿ ಕುಸ್ತಿ ನಡೆದಿದೆ. ಸರಗಳ್ಳತನ ಮಾಡುವ ಟೀಂ ಪತ್ತೆ ಕಾರ್ಯಕ್ಕೆ ತೆರಳಿದ್ದ ಪೊಲೀಸರ ಮೇಲೆ ಮೂರು ಜನ ಆರೋಪಿಗಳು ಮತ್ತವರ ಸಹಚರರು ಹಲ್ಲೆ ನಡೆಸಿದ ಘಟನೆ
ಧಾರವಾಡದ ಸಿಟಿ ಶಾಪಿಂಗ್ ಸೆಂಟರ್ ಬಳಿ ನಡೆದಿದೆ.
ಸರಗಳ್ಳತನ ಮಾಡುವ ತಂಡವನ್ನು ಪತ್ತೆ ಕಾರ್ಯಕ್ಕೆ ಬೆಂಗಳೂರಿನಿಂದ ಕಾಮಾಕ್ಷಿ ಪಾಳ್ಯ ಠಾಣೆ ಎಸ್ ಐ ಸಂತೋಷ, ಮಾಗಡಿ ರೋಡ್ ಎಸ್ ಐ ರವಿಕುಮಾರ್ ನೇತೃತ್ವದ ತಂಡ ಧಾರವಾಡಕ್ಕೆ ಆಗಮಿಸಿದ್ದರು. ಅಲ್ಲಿ ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಪೊಲೀಸರೊಂದಿಗೆ ಗಲಾಟೆಯಾಗಿದೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಬಿಯರ್ ಬಾಟಲ್ ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಬಳಿಕ ತಾವೇ ಬಿಯರ್ ಬಾಟಲಿಯಿಂದ ಇರಿದು ಕೊಂಡಿದ್ದಾರೆ. ಘಟನೆಯಲ್ಲಿ ಪಿಎಸ್ ಐ ಸಂತೋಷ್ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ ಐ ಸಂತೋಷ್ ಈ ಕುರಿತು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.