ಅತಿಕ್ರಮಣ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್‍ನಲ್ಲಿ ಪ್ರಕರಣ ದಾಖಲಾಗಿದೆ.

0

ಹೈದರಾಬಾದ್: ಅನುಮತಿ ಇಲ್ಲದೆಯೇ ಬೇಲಿ ತೆರವುಗೊಳಿಸಿ ಉಸ್ಮೇನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್‍ನಲ್ಲಿ ಪ್ರಕರಣ ದಾಖಲಾಗಿದೆ.

ಸಂಸದರು ತಮ್ಮ ಅನುಮತಿ ಇಲ್ಲದೆಯೆ ಬೇಲಿ ತೆರವುಗೊಳಿಸಿ ವಿವಿಗೆ ನುಗ್ಗಿರುವುದಾಗಿ ವಿಶ್ವವಿದ್ಯಾಲಯ ದೂರಿದೆ. ತೇಜಸ್ವಿ ಸೂರ್ಯ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿರುವುದಾಗಿ ವಿವಿ ನುಡಿದಿದೆ.

ಬಿಜೆಪಿ ಪರ ಪ್ರಚಾರಕ್ಕೆ ಹೈದರಾಬಾದ್ ತೆರಳಿದ್ದ ತೇಜಸ್ವಿ ಅವರು ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಉಸ್ಮೇನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆದರೆ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಬೇಲಿ ಹಾಕಿ ಸಂಸದರನ್ನು ತಡೆಯಲಾಗಿತ್ತು.

ತೇಜಸ್ವಿ ಮತ್ತು ಅವರ ಬೆಂಬಲಿಗರು ಬೇಲಿಯನ್ನು ತೆರವುಗೊಳಿಸಿ ವಿವಿ ಪ್ರವೇಶಿಸಿದ್ದರು.