ಮೂಲಭೂತ ಹಕ್ಕುಗಳನ್ನು ಅನುಭವಿಸುವುದು ಮಾತ್ರವಲ್ಲದೇ ಮೂಲಭೂತ ಕರ್ತವ್ಯಗಳ ಪಾಲನೆ ಅತಿ ಮುಖ್ಯ : ಖ್ಯಾತ ವಕೀಲರಾದ ಅಶೋಕ ಹಲಗಲಿ ಅಭಿಪ್ರಾ

0

ಬೆಳಗಾವಿ:ಪ್ರತಿಯೊಬ್ಬಭಾರತೀಯರು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಅನುಭವಿಸುವುದು ಮಾತ್ರವಲ್ಲದೇ ಮೂಲಭೂತ ಕರ್ತವ್ಯಗಳ ಪಾಲನೆ ಅತಿ ಮುಖ್ಯವಾಗಿದೆಅಂದಾಗ ಮಾತ್ರ ಸಂವಿಧಾನ ದಿನ ಆಚರಣೆಯ ಸಾರ್ಥಕತೆಎದ್ದುಕಾಣುತ್ತದೆ ಎಂದು ಬೆಳಗಾವಿಯ ಖ್ಯಾತ ವಕೀಲರಾದ ಅಶೋಕ ಹಲಗಲಿ ಅಭಿಪ್ರಾಯಪಟ್ಟರು.

ಗುರುವಾರ26ರಂದು ನಗರದ ಸಂಗೊಳ್ಳಿ ರಾಯಣ್ಣಪ್ರಥಮದರ್ಜೆಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿಆಯೋಜಿಸಲಾದಸಂವಿಧಾನ ದಿನಾಚರಣೆಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತ, ಭಾರತದ ಸಂವಿಧಾನದರಚನೆಯ ಹಿನ್ನೆಲೆ, ಸಂವಿಧಾನರಚನಾ ಸಭೆಯ ಪಾತ್ರ ಹಾಗೂ ಸಂವಿಧಾನರಚಿಸುವಲ್ಲಿಡಾ. ಬಿ. ಆರ್. ಅಂಬೇಡ್ಕರಅವರಕೊಡುಗೆಯನ್ನು ಸ್ಮರಿಸಿದರು.

ಭಾರತದ ಸಂವಿಧಾನಜಗತ್ತಿನಲ್ಲಿಯೇಅತಿ ದೀರ್ಘ ಲಿಖಿತ ಸಂವಿಧಾನವಾಗಿದ್ದು, ಕೇಂದ್ರ, ರಾಜ್ಯ, ಸ್ಥಳೀಯ ಅಲ್ಲದೇ ಅನೇಕ ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಸ್ಪಷ್ಟ ವಿವರಣೆಯನ್ನು ಸಂವಿಧಾನ ಹೊಂದಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನುಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕುಎಂದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಎಂ. ಜಯಪ್ಪಅವರುಸಂವಿಧಾನದ ಪೂರ್ವಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಮಾತನಾಡುತ್ತ, ಪ್ರತಿಯೊಬ್ಬರು ಸಂವಿಧಾನವನ್ನು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ಪದವಿ ಮಟ್ಟದಲ್ಲಿಎಲ್ಲ ಕೋರ್ಸ್‍ಗಳಿಗೆ ಭಾರತದ ಸಂವಿಧಾನವನ್ನುಕಡ್ಡಾಯ ಪತ್ರಿಕೆಯನ್ನಾಗಿಅಳವಡಿಸಿದೆ.

ವಿದ್ಯಾರ್ಥಿಗಳು ಸಂವಿಧಾನ ನೀಡಿದ ಹಕ್ಕುಗಳನ್ನು ಅರಿತುಕೊಂಡುತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಹಾಗೂ ಸಂವಿಧಾನಾತ್ಮಕ ಕರ್ತವ್ಯಗಳನ್ನು ಅರ್ಥೈಸಿಕೊಂಡು ಉತ್ತಮಆರೋಗ್ಯಕರಸಮಾಜದ ನಿರ್ಮಾತೃಗಳಾಗಬೇಕೆಂದು ಕೀವಿಮಾತು ಹೇಳಿದರು.

ಉಪಪ್ರಾಚಾರ್ಯರಾದ ಅನಿಲ ರಾಮದುರ್ಗ ಸ್ವಾಗತಿಸಿದರು. ಡಾ. ರಮೇಶಎಮ್.ಎನ್. ಪ್ರಾಸ್ತಾವಿಕವಾಗಿಮಾತನಾಡಿದರು. ವಿದ್ಯಾರ್ಥಿನಿ ರಾಖಿಕಲ್ಪತ್ರಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸಂಗೀತಾ ಲಮಾಣಿ ನಿರೂಪಿಸಿದರು.

ಡಾ. ಮಲ್ಲೇಶದೊಡ್ಡಲಕ್ಕಣ್ಣವರ ವಂದಿಸಿದರು. ಮಹಾವಿದ್ಯಾಲಯದವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಅಲ್ಲದೇ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಈ ಕಾರ್ಯಕ್ರಮವನ್ನು ವಿಕ್ಷಿಸಿದರು.