ಗುತ್ತಿಗೆದಾರರಾದ ಎಸ್.ಎಸ್.ಹಿರೇಮಠ, ಬಿ.ಎಫ್.ಕೊಳದೂರ, ಬಿ.ಜಿ.ಬಿಲ್ಲಶಿವಣ್ಣವರ ನೇತೃತ್ವದಲ್ಲಿ ಸರ್ವ ಸದಸ್ಯರು ಸಭೆ ಸೇರಿ ಸಮ್ಮತದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯನ್ನು ಆಯ್ಕೆ

0

ಬೈಲಹೊಂಗಲ- ಬೈಲಹೊಂಗಲ ತಾಲೂಕಾ ಗುತ್ತಿಗೆದಾರರ ಸಂಘದ 2020-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾನಂದ ಮಡಿವಾಳರ ಉಪಾಧ್ಯಕ್ಷರಾಗಿ ಉದಯ ಬೆಳಗಾವಿ ಅವಿರೋಧವಾಗಿ ಭಾನುವಾರ ಆಯ್ಕೆಯಾದರು.

ಸಂಘದ ಕಾರ್ಯಾಲಯದಲ್ಲಿ ಹಿರಿಯ ಗುತ್ತಿಗೆದಾರರಾದ ಎಸ್.ಎಸ್.ಹಿರೇಮಠ, ಬಿ.ಎಫ್.ಕೊಳದೂರ, ಬಿ.ಜಿ.ಬಿಲ್ಲಶಿವಣ್ಣವರ ನೇತೃತ್ವದಲ್ಲಿ ಸರ್ವ ಸದಸ್ಯರು ಸಭೆ ಸೇರಿ ಸಮ್ಮತದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯನ್ನು ಆಯ್ಕೆ ಮಾಡಿದರು.

ಕಾರ್ಯದರ್ಶಿಯಾಗಿ ಬಸವರಾಜ ಸುತಗಟ್ಟಿ, ಕೋಶಾಧ್ಯಕ್ಷರಾಗಿ ಎ.ಎಂ.ಬಾಗವಾನ, ನಿರ್ದೇಶಕರಾಗಿ ಎ.ಎಸ್.ಹೊಸೂರ, ಎಸ್.ವಾಯ್.ದಿವಾನದ, ಎಸ್.ಎ.ಗಾಣಿಗೇರ, ಸಿ.ಬಿ.ಮಠಪತಿ, ಎನ್.ಬಿ.ಕುರಿ, ಸಿ.ಜಿ.ನಾಗನಗೌಡರ, ಬಸವರಾಜ ನರೇಗಲ್ಲ ಆಯ್ಕೆಯಾದರು.
ನೂತನ ಅಧ್ಯಕ್ಷ ಶಿವಾನಂದ ಮಡಿವಾಳರ ಅಧಿಕಾರ ಸ್ವೀಕರಿಸಿ ಮಾತನಾಡಿ,

ಬೈಲಹೊಂಗಲ ತಾಲೂಕು ಗುತ್ತಿಗೆದಾರ ಸಂಘದ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅವಶ್ಯವಾಗಿದೆ ಎಂದರಲ್ಲದೇ ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ

ಎಂದು ಮನವಿ ಮಾಡಿದರು. ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಗುತ್ತಿಗೆದಾರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.