ಆಹಾರ ಬಳಸುವುದರ ಜೊತೆಗೆ ಯೋಗ, ವ್ಯಾಯಾಮ ಮಾಡುವುದು ಅತೀ ಅವಶ್ಯವಿದೆ’ ಎಂದು ಯೋಗಪಟು ಸಂಗಮೇಶ ಸವದತ್ತಿಮಠ ಹೇಳಿದರು.

0

ಬೈಲಹೊಂಗಲ- ‘ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಿತವ್ಯಯ ಆಹಾರ ಬಳಸುವುದರ ಜೊತೆಗೆ ಯೋಗ, ವ್ಯಾಯಾಮ ಮಾಡುವುದು ಅತೀ ಅವಶ್ಯವಿದೆ’ ಎಂದು ಯೋಗಪಟು ಸಂಗಮೇಶ ಸವದತ್ತಿಮಠ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಯೋಗ ಶಿಬಿರ ನಡೆಸಿಕೊಟ್ಟು ಅವರು ಮಾತನಾಡಿ, ‘ಪಟ್ಟಣ ಸುಂದರವಾಗಿರಲು, ಜನತೆಯ ಆರೋಗ್ಯ ಕಾಪಾಡಲು ತಮ್ಮ ಜೀವದ ಹಂಗು ಮರೆತು ಸೇವೆ ಸಲ್ಲಿಸುತ್ತಿರುವ ಕರೊನಾ ವಾರಿಯರ್ಸಗಳಾದ ಪುರಸಭೆ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ

ಹಾಗೂ ಕರೊನ ವಿರುದ್ದ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಆಹಾರ, ಜೀವನ ಶೈಲಿ ಕುರಿತು ಜಾಗೃತಿಗೊಳಿಸಲಾಗುತ್ತಿದೆ. ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ ಕೊವಿಡ-19 ಸೋಂಕು ತಡೆಗಟ್ಟಲು ದೇಶಾದ್ಯಾಂತ ಲಾಕಡೌನ ಘೋಷಿಸಿದ ಹಿನ್ನೆಲೆಯಲ್ಲಿ ಜನತೆ ತಮ್ಮ ಮನೆ ಬಿಟ್ಟು ಹೊರಗೆ ಬರದೆ ಸಂದರ್ಭದಲ್ಲಿ ಪೌರ ಕಾರ್ಮಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸ್ವಚ್ಚತೆ, ಮನೆ, ಮನೆಗೆ ಹಾಲು ವಿತರಿಸಿದ ಕಾರ್ಯ ಶ್ಲಾಘನೀಯವಾಗಿದೆ. ಪೌರ ಕಾರ್ಮಿಕರು ತಮ್ಮ ಸದೃಡ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತೀ ಅವಶ್ಯವಾಗಿದ್ದು ಪ್ರತಿಯೊಬ್ಬರು ಯೋಗಕ್ಕೆ ಮೊರೆ ಹೋಗಬೇಕೆಂದರು.

ಅಭಿಯಂತರ ಸತೀಶ ಖಜ್ಜಿಡೊಣಿ, ಬಸವರಾಜ ಕಲಾದಗಿ, ವಿಜಯ ಪತ್ತಾರ, ಪೌರ ಕಾರ್ಮಿಕರು ಇದ್ದರು.