ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿಪಂ. ಸದಸ್ಯ ವೀರಣ್ಣ ಕರಿಕಟ್ಟಿ

0

ಬೈಲಹೊಂಗಲ- ತಾಲೂಕಿನ ಬೆಳವಡಿ ಗ್ರಾಪಂ. ಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಜಿಪಂ. ಸದಸ್ಯ ವೀರಣ್ಣ ಕರಿಕಟ್ಟಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂ. ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಜನತೆಗೆ ಅನುಕೂಲ ಮಾಡಿಕೋಡಬೇಕು. ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪಿಡಿಒ ಉಸ್ಮಾನ ನದಾಫ ಮಾತನಾಡಿ, ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಬದ್ದವಾಗಿದ್ದು, ಮಕ್ಕಳ ಉದ್ಯಾನವನ ನಿರ್ಮಿಸಲು ರೂ. 5 ಲಕ್ಷ, ಕೆರೆ ಅಭಿವೃದ್ಧಿಗೆ ರೂ. 10 ಲಕ್ಷ, ಡಿಜಿಟಲ್ ಗ್ರಂಥಾಲಯಕ್ಕೆ ರೂ.3.5 ಲಕ್ಷ, ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ರೂ.13 ಲಕ್ಷ, ಗ್ರಾಪಂ.ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಗಳಿಗೆ ರೂ.15 ಲಕ್ಷ ವೆಚ್ಚದಲ್ಲಿ ಶೌಚಾಲಾಯ ನಿರ್ಮಾಣ ಮಾಡಲಾಗವುದು,

ಅಲ್ಲದೇ ಸಾರ್ವಜನಿಕರ ಸಮಸ್ಯೆಗಳ ದೂರು ಆಲಿಸಲು ವ್ಯಾಟ್ಸಪ್ಪ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ತ್ವರಿತ ಗತಿಯಲ್ಲಿ ಸೇವೆ ಸಲ್ಲಿಸಲು ವಾಕಿಟಾಕಿ ವ್ಯವಸ್ಥೆಯನ್ನು ಮಾಡಲಾಗಿದೆ. ಅಂದಾಜು ರೂ.50 ಲಕ್ಷ ವೆಚ್ಚದಲ್ಲಿ ಗ್ರಾಮವನ್ನು ಅಭಿವೃದ್ದಿ ಪಡಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಬೆಳವಡಿ ಗ್ರಾಪಂ.ವ್ಯಾಪ್ತಿಯ ನಾಲ್ಕು ದಿಕ್ಕಿನ ರಸ್ತೆಗಳಿಗೆ ಸ್ವಾಗತ ಬೊರ್ಡ ಆಳವಡಿಸಲಾಗಿದೆ ಎಂದರು.

ಬರುವ ದಿನಗಳಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲು ಪಣ ತೊಡಲಾಗವುದು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕೆಂದರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂವಿಧಾನ ದಿನಾಚಾರಣೆ ಅಂಗವಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಪಂ.ಸದಸ್ಯೆ ಅಮೃತಾ ಕಕ್ಕಯ್ಯನವರ, ಮುಖಂಡರಾದ ಮಹಾರುದ್ರಪ್ಪ ನೆಲ್ಲಿಗಣಿ, ಈರಪ್ಪ ಬಳಿಗಾರ, ಪ್ರಕಾಶ ಹುಂಬಿ, ಕಾರ್ಯರ್ಶಿ ಶ್ರೀಧರ, ಎಸ್‍ಡಿಎ ಕಾಳಪ್ಪ ಕಂಬಾರ ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.