ಬೆಳಗಾವಿಯನ್ನು ಮಹಾ ರಾಷ್ಟ್ರಕ್ಕೆ ಮಾರಾಟ ಮಾಡು ವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

0

ಬೆಳಗಾವಿ, ನ. 27- ಮರಾಠಾ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಳಗಾವಿಯನ್ನು ಮಹಾ ರಾಷ್ಟ್ರಕ್ಕೆ ಮಾರಾಟ ಮಾಡು ವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಹಿರೇಬಾಗೇವಾಡಿಯ ಟೋಲ್ ಗೆಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುವರ್ಣ ವಿಧಾನ ಸೌಧದ ಮುಂದೆ ಅನೇಕ ಪ್ರತಿಭಟನೆ ಮಾಡಿದ್ದೇವೆ. ಸುವರ್ಣ ಸೌಧ ನಿರ್ಜಿವವಾಗಿದೆ. ಅದನ್ನು ಸಿಎಂ ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಾರೆ ಎಂದು ಕಿಡಿ ಕಾರಿದರು.

ಮರಾಠ ಸಮುದಾಯಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಮುಂದೆ ಬಂದರೆ ಒಂದು ಟೆಂಡರ್ ಹಾಕಿ ಮಾರಾಟ ಮಾಡುವ ದುರುದ್ದೇಶ ಹೊಂದಿದ್ದಾರೆ. ಸೌಧದ ಸುತ್ತ 144 ಜಾರಿ ಮಾಡಿದ್ದಾರೆ. ಕಾರಣ ಏನು. ಇದು ಪೊಲೀಸ್ ರಾಜ್ಯನಾ ಎಂದು ಪ್ರಶ್ನಿಸಿದ ಅವರು, ಬೆಳಗಾವಿಯಲ್ಲಿ ಕರಾಳ ದಿನಾ ಚರಣೆ ಮಾಡುವ ಎಂಇಎಸ್ ಗೆ ಗಡಿಪಾರು ಮಾಡಲಿಲ್ಲ.

ಬೆಳಗಾವಿ ಎಲ್ಲ ರಾಜಕಾರಣಿಗಳು ಎಂಇಎಸ್ ಏಜೆಂಟ್ ಗಳು. ಶಿವಸೇನೆಯವರು ಯಾವಾಗ ಬೇಕಾದರೂ ಬೆಳಗಾವಿಗೆ ಬರಬಹುದು. ಕನ್ನಡಿ ಗರು ಬಂದರೆ ಹಿರೇಬಾಗೇವಾಡಿಯಲ್ಲಿ ತಡೆಯುತ್ತದೆ. ನಿಮ್ಮ ಸರಕಾರ ಮರಾಠಿ ಸರಕಾರವಾ ಅಥವಾ ಶಿವಸೇನೆಯ ಸರಕಾರವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯವನ್ನು ಯಡಿಯೂರಪ್ಪ ಹರಾಜಿಗೆ ಇಟ್ಟಿದ್ದಾರೆ. ಮರಾಠಿಗರಿಂದ ಕನ್ನಡರಿಗರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಜತ್ತ, ಸೋಲ್ಲಾಪುರದಲ್ಲಿ ಕನ್ನಡರಿಗರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲಿ ಯಾವುದೇ ಪ್ರಾಧಿಕಾರ ರಚನೆ ಮಾಡಿಲ್ಲ. ಯಡಿಯೂರಪ್ಪನವರೇ ನಿಮಗೆ ಮರಾಠಾ ಪ್ರಾಧಿಕಾರ ಮಾಡಲು ನಿಮಗೇನು ಅಧಿಕಾರ. ಒಂದು ಕ್ಷಣದಲ್ಲಿ ನೀವು ಅಧಿಕಾರದಲ್ಲಿ ಇರುಲು ಲಾಯಕಿಲ್ಲ. ಕೂಡಲೆ ರಾಜೀ ನಾಮೆ ನೀಡುವಂತೆ ಕನ್ನಡ ಸಂಘಟನೆಗಳು ಒತ್ತಾಯ ಮಾಡುತ್ತದೆ ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಬೇಕಾದಷ್ಟು ಸಮುದಾಯ ಭಾರೀ ತೊಂದರೆಯಲ್ಲಿವೆ. ಈಗ ಮರಾಠಿ ಪ್ರಾಧಿಕಾರ ಮಾಡುತ್ತಿದ್ದಾರೆ. ಮುಂದೆ ತಮಿಳರು ಸಹ ಪ್ರಾಧಿಕಾರ ಮಾಡಿ ಎಂದು ಹೇಳುತ್ತಾರೆ. ಹೀಗೆ ಮಾಡಿದರೆ ಯಡಿಯೂರಪ್ಪ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬರೆದುಕೊಡುತ್ತಾರೆ ಎಂದು ಹರಿಹಾಯ್ದರು.

ಬಸವ ಕಲ್ಯಾಣದಲ್ಲಿ ಬಸವಣ್ಣನ ನಾಡು, ಚಿಂತನೆ ಮಾಡಲಿಲ್ಲ. ಬಸವಣ್ಣನವರ ಇತಿಹಾಸ ತಿಳಿಸುವ ಕೆಲಸ ಮಾಡಲಿಲ್ಲ. ಮರಾಠಿ ಪ್ರಾಧಿಕಾರ ರಚನೆ ಮಾಡಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಮಾರುವ ಯೋಜನೆ ಹಮ್ಮಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರ, ಚಲನಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ, ರಾಜು ಕೋಲಾ ಸೇರಿದಂತೆ ಇನ್ನಿತರರು ಉಪಸ್ಥಿತ ರಿದ್ದರು.