ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ವಿವಾಹ ಪೂರ್ವ ಕಾರ್ಯಕ್ರಮಗಳೆಲ್ಲ ನಡೆದು ಶುಕ್ರವಾರ ವಿವಾಹ ಶಾಸ್ತ್ರ ನೆರವೇರಿತು.

0

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಮತ್ತು ಭದ್ರಾವತಿಯ ಬಿ.ಕೆ.ಶಿವಕುಮಾರ ಪುತ್ರಿ ಡಾ.ಹಿತಾ ವಿವಾಹ ಗೋವಾದ ಲೀಲಾ ಪ್ಯಾಲೇಸ್ ಹೊಟೆಲ್ ನಲ್ಲಿ ಇದೀಗ ನೆರವೇರಿದೆ.

ವಿನಯ ಗುರೂಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮುಖಂಡರಾದ ಯು.ಟಿ.ಖಾದರ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಅಶೋಕ ಪಟ್ಟಣ, ಶಾಸಕಿ ಅಂಜಲಿ ನಿಂಬಾಳಕರ್,

ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಮೃಣಾಲ್ ಅವರು ಹಿತಾ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.

ಕಳೆದ 4 ದಿನಗಳಿಂದ ವಿವಾಹ ಪೂರ್ವ ಕಾರ್ಯಕ್ರಮಗಳೆಲ್ಲ ನಡೆದು ಶುಕ್ರವಾರ ವಿವಾಹ ಶಾಸ್ತ್ರ ನೆರವೇರಿತು.