ನದೀಮ‌ ಸನದಿಗೆ‌ ಅಮ್ಮ‌ ಪ್ರಶಸ್ತಿ ಪ್ರದಾನ

0

ಕಲಬುರುಗಿ : ಕಲಬುರಗಿ ಜಿಲ್ಲೆಗಳಲ್ಲಿ ‌ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ‌ ಮುನ್ನೂರ ಪ್ರತಿಷ್ಠಾನವು  ಕೊಡಮಾಡುವ ರಾಜ್ಯಮಟ್ಟದ ಅಮ್ಮ ಸಾಹಿತ್ಯ ಪ್ರಶಸ್ತಿಯನ್ನು ಬೆಳಗಾವಿಯ‌ ಯುವಕವಿ ನದೀಮ‌ ಸನದಿ ಇವರಿಗೆ‌ ನಿನ್ನೆ ಪ್ರದಾನ ಮಾಡಲಾಯಿತು.

ನದೀಮ‌ ಸನದಿ ಅವರ “ಹುಲಿಯ ನೆತ್ತಿಗೆ‌‌ ನೆರಳು” ಕವನ‌ ಸಂಕಲನ ಈ‌ ಪ್ರಶಸ್ತಿಗೆ ಭಾಜನವಾಗಿದ್ದು, ಕಳೆದ ತಿಂಗಳು‌ ಇದೇ ಕೃತಿಗೆ ಹಾಸನದಲ್ಲಿ ಕಾವ್ಯ ಮಾಣಿಕ್ಯ ಪ್ರಶಸ್ತಿ‌ ನೀಡಿ ಗೌರವಿಸಲಾಗಿತ್ತು.

ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ನದೀಮ ಅವರು ಸಧ್ಯಃ ಬೆಳಗಾವಿ ಜಿಲ್ಲೆಗಳ ಸಿಟಿ‌ ನಿಯಮಿತದಲ್ಲಿ‌ ಸಹಾಯಕ ಅಭಿಯಂತರರಾಗಿ‌ ಸೇವೆ ಸಲ್ಲಿಸುತ್ತಿದ್ದಾರೆ.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ‌ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ‌ ಹಾಗೂ ಮಹಿಪಾಲರೆಡ್ಡಿ ಮುನ್ನೂರ ದಂಪತಿಗಳು ಉಪಸ್ಥಿತರಿದ್ದರು.