ನಲ್ಲಿ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು

0

ನಲ್ಲಿ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು
ಬೆಳಗಾವಿ, ನ 27 : ಸಮುದಾಯದ ಸಹಭಾಗಿತ್ವದೊಂದಿಗೆ ಗ್ರಾಮದ ಎಲ್ಲ ಕುಟುಂಬಗಳಿಗೆ ನಲ್ಲಿ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ ಮಿಷನ್ ಉದ್ದೇಶ ನಾವೆಲ್ಲರು ಕೂಡಿ ಸಾಕಾರ ಮಾಡುವ ಅಗತ್ಯವಿದೆ ಎಂದು ಹಂದಿಗನೂರ ಗ್ರಾಮ ಪಂಚಾಯಿತಿ ಪಿ.ಡಿ.ಓ ಲೀಲಾ ಮೇತ್ರಿ ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತಿ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೆಳಗಾವಿ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಬೆಳಗಾವಿ ಇವರು ಗುರುವಾರ (ನ.26) ರಂದು ಹಮ್ಮಿಕೊಂಡ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ರವರು 2024ರ ವೇಳೆಗೆ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು ಗುರಿ ಹೊಂದಿದೆ. ಕರ್ನಾಟಕ ರಾಜ್ಯ ಸರಕಾರವು ಈ ಗುರಿಯನ್ನು 2023ರ ಒಳಗಾಗಿ ರಾಜ್ಯದ ಎಲ್ಲಾ ಗ್ರಾಮ, ಜನವಸತಿಗಳಲ್ಲಿನ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸಬೇಕಿದೆ. ಹಾಗು ಸಮುದಾಯ ಈ ಯೋಜನೆಯಲ್ಲಿ 10% ವಂತಿಗೆ ನೀಡಬೇಕು.
ಕೇಂದ ರಾಜ್ಯ ಸರಕಾರಗಳು 75% ಗ್ರಾಮ ಪಂಚಾಯತಿ 15% ಹಣ ವಿನಿಯೋಗಿಸುತ್ತಿವೆ. ಹೀಗಾಗಿ ಜನರಲ್ಲಿ ನೀರಿನ ಉಪಯೋಗ ಮತ್ತು ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ಕಚ್ಚಾ ನೀರನ್ನು ಪುನರ್ ಬಳಕೆ ಮಾಡುವ ವಿಧಾನ ಹಾಗೂ ಉತ್ತಮ ನೈರ್ಮಲ್ಯ ಅಭ್ಯಾಸಗಳ ಕುರಿತು ಜನರಲಿ ್ಲ ವ್ಯಾಪಕವಾದ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅನುಷ್ಠಾನ ಸಂಸ್ಥೆಯ ಜಲಜೀವನ್ ಮಿಷನ್ ಯೋಜನೆ ತಂಡದ ನಾಯಕರು ಮಾತನಾಡಿ ಪ್ರತಿ ಗ್ರಾಮೀಣ ಕುಟುಂಬಗಳಿಗೆ  FHTC (Functional household tap connection)ಒದಗಿಸುವುದು, ಪ್ರತಿ ವ್ಯಕ್ತಿಗೆ ಪ್ರತಿ ದಿನ 55 ಐPಅಆ ನೀರು ಒದಗಿಸುವುದು, ಶಾಲೆಗಳು ಅಂಗನವಾಡಿ ಕೇಂದ್ರಗಳು, ಜಿಪಿ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಕ್ಷೇಮ ಕೇಂದ್ರಗಳು ಮತ್ತು ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ಟ್ಯಾಪ್ ಸಂಪರ್ಕವನ್ನು ಒದಗಿಸುವುದು ಮುಖ್ಯವಾಗಿದೆ ಎಂದರು ಮಂಜುನಾಥ ಪಾಟೀಲ ಜಿಲ್ಲಾ ಸಂಯೋಜಕರು ಎಸ್ ಡಬ್ಲೂ ಎಮ್ ಜಿಲ್ಲಾ ಪಂಚಾಯತಿ ಇವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಗ್ರಾಮವನ್ನು ತ್ಯಾಜ್ಯ ಮುಕ್ತ, ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಸುವಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿದರು.
ಹಂದಿಗನೂರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಕುರಿಹಾಳ, ಜೋಡಕೆನಟ್ಟಿ, ಹಂದಿಗನೂರ ಗ್ರಾಮದ ಜನರು, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.