ಎರಡಕ್ಕಿಂತ ಹೆಚ್ಚಾಗಿರುವ ಬಂದೂಕುಗಳನ್ನು ಜಮೆ ಮಾಡಬೇಕು: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

0

 

ಬೆಳಗಾವಿ, ನ 27 : ಲೈಸೆನ್ಸ್‍ದಾರರು ಪಡೆದಿರುವ ಬಂದೂಕು ಪರವಾನಿಗೆಯಲ್ಲಿ ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019 ರ ಕಲಂ 3 ರನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ತಿಳಿಸಿದ್ದಾರೆ.
ಆದ್ದರಿಂದ ಮೂರನೇ ಬಂದೂಕಿಗೆ ಪರವಾನಿಗೆಯನ್ನು ಪಡೆದ ಪರವಾನಿಗೆದಾರರಿದ್ದಲ್ಲಿ ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಿ ಮೂರನೇ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನವನ್ನು ನೀಡಿಲಾಗಿದ್ದು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ನೀಡಿದ ಲೈಸೆನ್ಸ್‍ದಾರರು ಮೂರು ಆಯುಧಗಳನ್ನು ಹೊಂದಿದ್ದಲ್ಲಿ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯನ್ವಯ ಎರಡಕ್ಕಿಂತ ಹೆಚ್ಚುವರಿಯಾಗಿ ಹೊಂದಿರುವ ಮೂರನೇ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 13 ರೊಳಗಾಗಿ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ಅವರು ಆದೇಶಿಸಿದ್ದಾರೆ.//////

ಸಹಕಾರ ಸಂಘಗಳ ನವೀಕರಣಕ್ಕೆ ಡಿ.31 ಕೊನೆಯ ದಿನ

ಬೆಳಗಾವಿ, ನ 27 : ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮ 1960 ರಡಿ ನೊಂದಣಿಯಾದ ಪ್ರತಿಯೊಂದು ಸಂಘವು ಪ್ರತಿ ವರ್ಷ ಲೆಕ್ಕಪತ್ರಗಳ ಫೈಲಿಂಗ್ ಮಾಡಬೇಕಾಗಿರುತ್ತದೆ. ಆದರೆ ಕಲಂ 13 ರಂತೆ ಅನೇಕ ಸಂಘ ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ಫೈಲಿಂಗ್ ಮಾಡದೇ ಇರುವ ಸಂಘ ಸಂಸ್ಥೆಗಳಿಂದ ಸದಸ್ಯರ ಹಿತದೃಷ್ಟಿಯಿಂದ ಒಂದು ಬಾರಿ ದಂಡ ವಿಧಿಸಿ ಷರತ್ತುಗಳಿಗೆ ಒಳಪಟ್ಟು ಡಿಸೆಂಬರ್ 31 ರ ಅಂತ್ಯದೊಳಗಾಗಿ ನವೀಕರಿಸಲು (ಫೈಲಿಂಗ್) ಸಹಕಾರ ಸಂಘಗಳ ನಿಬಂಧಕರು ತಿಳಿಸಿದ್ದಾರೆ.
ಷರತ್ತುಗಳು:-
5 ವರ್ಷಗಳಿಗೆ ಮೇಲ್ಪಟ್ಟು ನವೀಕರಿಸದ (ಫೈಲಿಂಗ್ )ಸಂಘ ಸಂಸ್ಥೆಗಳನ್ನು ಒಂದು ಬಾರಿ ಮಾತ್ರ ವರ್ಷವಾರು ರೂ.500 ರಂತೆ ಹೆಚ್ಚುವರಿ ದಂಡವಿದಿಸಿ ನವೀಕರಿಸಲಾಗುವುದು.
ಡಿಸೆಂಬರ್ 31 ರ ಅಂತ್ಯದ ಒಳಗೆ ನಿಗಧಿಪಡಿಸಿದ ದಾಖಲೆಗಳನ್ನು ಸಲ್ಲಿಸದ ಸಂಘಗಳನ್ನು ರದ್ದತಿಗೆ ಕ್ರಮವಿಡಲಾಗುವುದು. ಹಾಗೂ ಸಂಘದ ಎಲ್ಲಾ ಆಡಳಿತ/ಆಡಿಟ್ ವರದಿಗಳನ್ನು ಮುದ್ದಾಂ ಸಲ್ಲಿಸಲು ಅವಕಾಶವಿರುತ್ತದೆ.
ನವೀಕರಣಕ್ಕೆ ಸಂಬಂಧಿಸಿದಂತೆ ಸಂಘದ ಅಗತ್ಯ ದಾಖಲಾತಿಗಳೊಂದಿಗೆ ಸಂಘಗಳ ಜಿಲ್ಲಾ ನೊಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಸಹಕಾರ ಆಡಳಿತ ಭವನ, 1 ನೇ ಮಹಡಿ, ಜಕ್ಕೇರಿ ಹೊಂಡ ರೇಲ್ವೆ ಓವರ್ ಬ್ರಿಜ್ ಹತ್ತಿರ ಹಾಗೂ ಕೆ.ಎಚ್.ಬಿ. ಹೆರಿಟೇಜ ಎದುರಿಗೆ, ಬೆಳಗಾವಿ-590001. ಸಂಪರ್ಕಿಸಲು ಸಂಘಗಳ ಜಿಲ್ಲಾ ನೊಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////