ಪ್ರೊ. ಕಿರಣ ಪೋತದಾರ ಇವರಿಗೆ ಪಿ.ಎಚ್.ಡಿ. ಪದವಿ ಪ್ರಧಾನ

0

ಬೆಳಗಾವಿ    :ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕಿರಣ ಪೋತದಾರ ಇವರಿಗೆ ಪಿ.ಎಚ್.ಡಿ. ಪದವಿ ಪ್ರಧಾನ
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಪೋತದಾರ ಅವರು ಮಂಡಿಸಿದ “ದ ಸ್ಟಡಿ ಆನ್ ರಿಸೆಂಟ

ಜನರಲೈಶೇಷನ್ ಆಫ್ ಕಂಟಿನ್ಯುಅಸ್ ಆಂಡ್ ಹೋಮಿಯೋಮಾರ್ಪಿಸಂ ಮ್ಯಾಪ್ಸ್ ಯೂಸಿಂಗ್ ಬೈ-ಟೋಪೋಲಾಜಿ ಆಂಡ್ ಫಜಿ ಟೋಪೋಲಾಜಿಕಲ್ ಸ್ಪೇಸಸ್” ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ. ಸದಾನಂದ ಪಾಟೀಲ ಮಾರ್ಗದರ್ಶನದಿಂದ ಈ ಗೌರವ ಲಭಿಸಿದೆ.

ಪ್ರೊ. ಕಿರಣ ಪೋತದಾರ ಅವರ ಈ ಯಶಸ್ಸಿಗೆ ಸಂಸ್ಥೆಯ ನಿರ್ದೇಶಕಿಯರಾದ ಡಾ. ಸ್ಪೂರ್ತಿ ಪಾಟೀಲ, ಶ್ರದ್ಧಾ ಶೆಟ್ಟರ್, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.