ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ

0

ಮಥುರಾ: ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಹೊರವಲಯದಲ್ಲಿ ನಡೆದಿದೆ.

ಬಾಲಕಿಯ ಮೃತದೇಹ ಛತಿಕರ ಎಂಬಲ್ಲಿನ ಬಹುಹಂತದ ಪಾರ್ಕಿಂಗ್ ಜಾಗದಲ್ಲಿ ಕಂಡುಬಂದಿದೆ. ಒಂದು ದಿನದ ಹಿಂದೆ ಬಾಲಕಿ ನಾಪತ್ತೆಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಕಾಡಿನಿಂದ ಕಟ್ಟಿಗೆ ತರಲು ಮಹಿಳೆಯ ಜತೆ ಹೋಗಿದ್ದ ಬಾಲಕಿ ಗುರುವಾರ ನಾಪತ್ತೆಯಾಗಿದ್ದಳು. ಬಾಲಕಿಯ ಪತ್ತೆಗೆ ವಿಫಲ ಯತ್ನ ನಡೆಸಿದ ಮಹಿಳೆ ಆ ಬಳಿಕ ಕುಟುಂಬದವರಿಗೆ ವಿಷಯ ತಿಳಿಸಿದರು. ಗುರುವಾರ ಸಂಜೆ ಪೆÇಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ನೀಡಲಾಗಿತ್ತು.

ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿ ನಡುರಾತ್ರಿಯವರೆಗೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ ಎಂದು ಹಿರಿಯ ಪೆÇಲೀಸ್ ಅಧೀಕ್ಷಕ ಗೌರವ್ ಗ್ರೋವರ್ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ ಛತಿಕರದಲ್ಲಿ ಮೃತದೇಹ ಪತ್ತೆಯಾಗಿಯಿತು ಎಂದು ಅವರು ವಿವರಿಸಿದ್ದಾರೆ.

“ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಆಕೆಯ ಮೇಲೆ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ” ಎಂದು ನಗರ ಎಸ್ಪಿ ಉದಯಶಂಕರ ಸಿಂಗ್ ಹೇಳಿದರು.
ಈ ಘಟನೆ ಸಂಬಂಧ ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗ್ರೋವರ್ ವಿವರಿಸಿದ್ದಾರೆ.