– ರಾಜ್ಯದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 1,291 ಹೊಸ ಕೋವಿಡ್‌ ಪ್ರಕರಣಗಳು

0

ಬೆಂಗಳೂರು, ನ. 29- ರಾಜ್ಯದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 1,291 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 15 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 8,83,899 ಕ್ಕೆ ಏರಿಕೆಯಾಗಿದೆ. ಆ ಪೈಕಿ 11,765 ಜನರು ಸಾವಿಗೀಡಾಗಿದ್ದಾರೆ. ಇದುವರೆಗೆ 8,47,612 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 24,503 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ 374 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಂಗಳೂರು ನಗರದಲ್ಲಿ 686, ಮಂಡ್ಯ 48, ದಕ್ಷಿಣ ಕನ್ನಡ 48, ಹಾಸನ 41, ತುಮಕೂರು 39, ಉಡುಪಿ 38, ಮೈಸೂರು ಜಿಲ್ಲೆಯಲ್ಲಿ 37 ಹೊಸ ಪ್ರಕರಣಗಳು ದೃಢಪಟ್ಟಿವೆ.

ಬೆಳಗಾವಿ ಜಿಲ್ಲೆ ವರದಿ

ಬೆಳಗಾವಿ ಜಿಲ್ಲೆಯಲ್ಲಿ ಇಂದು 25 ಕೇಸ್ ಪತ್ತೆ ಆಗಿದ್ದು, .ಒಟ್ಟು ಸೋಂಕಿತರ ಸಂಖ್ಯೆ 25,641 ಕ್ಕೆ ಏರಿಕೆ ಆಗಿದೆ. ಇಂದು 32 ಜನರು ಬಿಡುಗಡೆ ಆಗಿದ್ದಾರೆ. 274 ಸಕ್ರಿಯ ಪ್ರಕರಣಗಳಿದ್ದು,ಈವರೆಗೆ 341 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.