ಬಾಕಿ ಅರ್ಜಿಗಳ ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ

0
ಬೆಳಗಾವಿ, ನ.30 : ಕೋವಿಡ್-೧೯ ಕಾರಣದಿಂದ ಸಕಾಲದಲ್ಲಿ ಬಹಳಷ್ಟು ಅರ್ಜಿಗಳು ಹಾಗೆಯೇ ಉಳಿದಿದ್ದು, ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಅರ್ಜಿ ವಿಲೇವಾರಿ ಚುರುಕುಗೊಳಿಸುವ ಉದ್ದೇಶದಿಂದ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಸಕಾಲ ಸಪ್ತಾಹ ಹಿನ್ನೆಲೆಯಲ್ಲಿ ಸೋಮವಾರ (ನ.30) ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಸಕಾಲದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಎಲ್ಲಾ ಒಂದು ಇಲಾಖೆಗಳಿಂದ ಆಗಬೇಕು ಎಂದರು.
 ವಿವಿಧ ಕಾರಣಗಳಿಂದ ಕೆಲ ಇಲಾಖೆಗಳಲ್ಲಿ 2014 ರಿಂದ ಬಾಕಿ ಇವೆ. ಕೆಲವೆಡೆ ಅರ್ಜಿಗಳ ತಿರಸ್ಕಾರದ ಪ್ರಮಾಣ ಹೆಚ್ಚಾಗಿದೆ.
ಕೆಲ ಜಿಲ್ಲೆಗಳಲ್ಲಿ ಶೂನ್ಯ ಸ್ವೀಕೃತಿ ಇರುವುದು ಕಂಡುಬಂದಿದೆ. ಪಕ್ಕದ ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳು ಸ್ವೀಕೃತವಾಗಿವೆ. ಆದ್ದರಿಂದ ಸಕಾಲ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಗಳಾದ ಎಂ ಜಿ ಹಿರೇಮಠ ಅವರು ತಿಳಿಸಿದರು.
ಸಕಾಲ ಸೇವೆಯಡಿ ಅತ್ಯುತ್ತಮ ಸಾಧನೆಗೈದ ಜಿಲ್ಲೆಯ ಅಧಿಕಾರಿಗಳಿಗೆ ಸೇವಾ ಸರ್ವೋತ್ತಮ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದರು.
ಸಕಾಲ ಸೇವೆಗಳ ಮಾಹಿತಿಯನ್ನು ನೀಡುವ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿದಿನದ ವರದಿಯ ಕುರಿತು ಮಾಹಿತಿಯನ್ನು ನೀಡಬೇಕು ಎಂದು  ಹೇಳಿದರು
ಸಕಾಲ ಸಪ್ತಾಹ ಆಚರಣೆಗೆ ಸಂಬಂಧಿಸಿದಂತೆ  ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡುಗುಂಟಿ ಅವರು, ಸಕಾಲ ಸೇವೆಗಳ ಅಧಿನಿಯಮ ಏಪ್ರಿಲ್ 2 2012 rond ಜಾರಿಯಲ್ಲಿದ್ದು ಸಕಾಲ ನಿಯಮದಡಿ 80+ ಇಲಾಖೆಗಳು ಹಾಗೂ950 ಕ್ಕು ಹೆಚ್ಚು ಸೇವೆಗಳು ಸಕಾಲ ನಿಯಮದಡಿ  ನೀಡಲಾಗುತ್ತಿದೆ. ನವೆಂಬರ್ 30 ರಿಂದ ಸಕಾಲ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ಸಕಾಲ ಯೋಜನೆಯ ನ್ನು ಯಶಸ್ವಿ ಗೊಳಿಸಬೇಕು ಎಂದು ಹೇಳಿದರು.
ಸಕಾಲ ಕುರಿತು ಜನ ಜಾಗೃತಿ ಮೂಡಿಸುವ ಉದ್ಧೇಶದಿ‌ಂದ ಇಲಾಖಾವಾರು ಬೇರೆ ಬೇರೆ ದಿನಾಂಕಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ನವೆಂಬರ್ 30 ಡಿಸೆಂಬರ್ 5 ರವರೆಗೆ ಕಂದಾಯ, ನಗರಾಭಿವೃದ್ಧಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಸಾರಿಗೆ ಇಲಾಖೆಗಳು ಸಕಾಲ ಸಪ್ತಾಹ ಆಚರಿಸಲಿವೆ.
ಡಿಸೆಂಬರ್ 7 ರಿಂದ 11ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸಪ್ತಾಹ ಹಮ್ಮಿಕೊಳ್ಳಲಾಗುವುದು.
ಅದೇ ರೀತಿ ಕೊನೆಯ ಹಂತದಲ್ಲಿ ಡಿ.14 ರಿಂದ 19 ರವರೆಗೆ ಉಳಿದ ಎಲ್ಲಾ ಇಲಾಖೆಗಳು ಸಕಾಲ ಸಪ್ತಾಹ ಆಚರಿಸಲಿವೆ ಎಂದು  ಹೇಳಿದರು.
ಸಕಾಲ ಸಪ್ತಾಹ ದ ಮುಖ್ಯ ಉದ್ದೇಶಗಳು.  1) ಸಕಾಲ ಯೋಜನೆಯ ಕುರಿತು ಸಾರ್ವಜನಿಕರ ಲ್ಲಿ ಜಾಗೃತಿ ಮೂಡಿಸುವುದು 2)ಎಲ್ಲಾ ಕಚೇರಿ ಮುಂಭಾಗದಲ್ಲಿ ಸಕಾಲ ಸೂಚನಾ ಫಲಕವನ್ನು ಅಳವಡಿಸಬೇಕು 3)ಕಾಲಮಿತಿ ಇರುವಂತಹ ಸೇವೆಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು 4)ಕಾಲಮಿತಿ ಮೀರಿ ಬಾಕಿ ಇರುವ ಪ್ರಕರಣಗಳನ್ನು ಸಪ್ತಾಹ ಕಾರ್ಯಕ್ರಮದಲ್ಲಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಂಡು ಕ್ರಮದ ಕುರಿತು ವರದಿ ನೀಡುವದು. 5) ಸಕಾಲ ಯೋಜನೆಯ ಕುರಿತಂತೆ ಮೇಲ್ಮನವಿ ಪ್ರಕರಣ ಆದ್ಯತೆ ಮೇರೆಗೆ ಇತ್ಯರ್ಥ ಪಡಿಸುವ ಕುರಿತು ಕ್ರಮ ಕೈಗೊಳ್ಳುವುದು. 6)ಕಾರ್ಯಕ್ರಮ ಯಶಸ್ವಿ ಗೊಳಿಸಲು ಇಲಾಖಾವಾರು ಓರ್ವ ಅಧಿಕಾರಿ, ವಿಷಯ ನಿರ್ವಾಹಕ, ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ತಂಡ ರಚನೆ ಮಾಡಿ ಅರ್ಜಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು ಹಾಗೂ ಸಕಾಲ ಮಿಷನ್ ಬೆಂಗಳೂರು ಹಾಗೂ ತಮ್ಮ ಇಲಾಖಾ ಮುಖ್ಯಸ್ಥರಿಗೆ ವರದಿ ಮಾಡುವದು. 7) ಈ ಪತ್ರಕ್ಕೆ ಲಗತ್ತಿಸಿದ ಸಾರ್ವಜನಿಕ ಸೇವೆಯ ಕುರಿತು  ವರದಿ ಕಳಿಸುವುದು. 7) ಆಯಾ ಇಲಾಖೆ ವಾರು ಸಕಾಲ ಸಪ್ತಾಹ ಜಾರಿಗೆ ತಂದಿರುವ ಕುರಿತು  ಪತ್ರಿಕಾ ಪ್ರಕಟಣೆಯನ್ನು ನೀಡಲು ಸೂಚಿಸಿದರು 8) ಸಕಾಲ ಸಪ್ತಾಹ ನಡೆಸಿರುವ ಬಗ್ಗೆ ಛಾಯಾ ಚಿತ್ರಗಳು ತೆಗೆದು ಸಕಾಲ ಬೆಂಗಳೂರು ಹಾಗೂ ತಮ್ಮ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸುವುದು. 8) ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಉಪ ವಿಭಾಗ ಅಧಿಕಾರಿಗಳು , ಭೂಮಿ ಸಮಾಲೋಚಕರು ಎಸ್ ಜೆ ಎಸ್ ಕೆ, ಸೇವಾ ಸಿಂಧು, ಆಧಾರ ಸಮಾಲೋಚಕರು, ಒಳಗೊಂಡ ತಂಡ ರಚನೆ ಮಾಡಿ ಅರ್ಜಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು. 9) ತಾಂತ್ರಿಕ ಸಮಸ್ಯೆಗಳನ್ನು ಮೊದಲು ಅಯಾ ಇಲಾಖಾ ತಂತ್ರಜ್ಞಾನ ಸ್ಮಲೋಚಕರೊಂಡಿಗೆ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕು ಎಂದು‌ ತಿಳಿಸಿದರು.
ಎಲ್ಲಾ ಇಲಾಖೆಯ ಸಿಬ್ಬಂದಿಗಳು  ಉಪಸ್ಥಿತರಿದ್ದರು.