ರಾಣಿ ಚನ್ನಮ್ಮ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ರಾಷ್ಟ್ರದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ವಸತಿ ಗೃಹ ಉದ್ಘಾಟನೆ ಮಾಡಿ ಉದ್ಘಾಟನಾ ಪರ ನುಡಿಗಳನ್ನಾಡಲು ಪ್ರಾರಂಭಿಸಿದ್ದರು

0

ಚನ್ನಮ್ಮನ ಕಿತ್ತೂರು : ಸ್ವಾತಂತ್ರ ಹೋರಾಟದ ಪ್ರಥಮ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ಎಂದು ಹೇಳುತ್ತಾರೆ ಆದರೆ ಕಿತ್ತೂರು ರಾಣಿ ಚನ್ನಮ್ಮ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ಹೋರಾಟ ಮಾಡುವ 42 ವರ್ಷ ಮುಂಚೆ ವೀರಗತ್ತಿ ಹಿಡಿದು ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ರಾಷ್ಟ್ರದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ವಸತಿ ಗೃಹ ಉದ್ಘಾಟನೆ ಮಾಡಿ ಉದ್ಘಾಟನಾ ಪರ ನುಡಿಗಳನ್ನಾಡಲು ಪ್ರಾರಂಭಿಸಿದರು


ಇಗಾಗಲೆ 24 ವಸತಿ ಗೃಹ ನಿರ್ಮಾಣ ಮಾಡಲಾಗಿದೆ ಇನ್ನೂ 12 ವಸತಿ ಗೃಹಗಳ ಅವಶ್ಯಕತೆ ಇದ್ದು ಅವುಗಳನ್ನು ಮುಂಬರುವ ದಿನಗಳಲ್ಲಿ ಅನುದಾನ ನೀಡುವ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಹಾಗೂ ಕಿತ್ತೂರಿಗೆ ನೂತನ ಪೊಲೀಸ್ ಠಾಣೆ ಕಟ್ಟಡಕ್ಕಾಗಿ ಮುಂಬರುವ ಬಜೆಟ್ಟನಲ್ಲಿ 2 ಕೋಟಿ ಅನುದಾನ ಕೊಡುತ್ತೇನೆ. ಹಿಂದೆ ನಾನು ಸಚಿವನಾಗಿದ್ದಾಗ ಕಿತ್ತೂರು ಪ್ರಾದಿಕಾರಕ್ಕೆ 8 ಕೋಟಿ ಅನುದಾನ ನೀಡಿ ಕಿತ್ತೂರು ಕೋಟೆ ಮತ್ತು ಕೋಟೆ ಆವರಣದಲ್ಲಿ ಇರುವ ರಸ್ತೆಗಳ ಅಭಿವೃದ್ಧಿ ಮಾಡಲು ಶ್ರಮಿಸಿದ್ದೇನೆ.

ಮುಂಬರು ದಿಮಾನಗಳಲ್ಲಿ ಐತಿಹಾಸಿಕ ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವನ್ನು ಮಾಡಲು ಹಾಗೂ ಕಿತ್ತೂರು ನಾಡಿನ ಸಂಪೂರ್ಣ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಮಾನ್ಯ ಗ್ರಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ನಾಡಿನ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಕೆಲಸ ಮಡುವವರ ಹತ್ತಿರ ಕೆಲಸ ಕೇಳುವುದ ನಮ್ಮ ಧರ್ಮ ಆದ್ದರಿಂದ ಕಿತ್ತೂರು ಮತ್ತು ಎಂ.ಕೆ ಹುಬ್ಬಳ್ಳಿಗೆ ಪೊಲೀಸ್ ಕಛೇರಿಗಾಗಿ ನೂತನ ಕಟ್ಟಡ ಹಾಗೂ ಎಂ.ಕೆ ಹುಬ್ಬಳ್ಳಿ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಕಿತ್ತೂರು ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು ವಾಹನಗಳ ದಟ್ಟಣೆ ಹೆಚ್ಚಾಗಿದೆ ಆದ್ದರಿಂದ ಕಿತ್ತೂರಿಗೆ ಟ್ರಾಪೀಕ್ ಪೊಲೀಸ್ ಠಾಣೆಯ ಅವಶ್ಯಕತೆ ಇದ್ದು ಬರುವ ದಿನಗಳಲ್ಲಿ ಸಚಿವರು ಈ ಕುರಿತು ಶ್ರಮ ವಹಿಸ ಕಿತ್ತೂರು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಬೇಡಿಕೆ ಇಟ್ಟರು

ಈ ವೇಳೆ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾ ನೀರಿಕ್ಷಕ ಹೆಚ್.ಆರ್. ರಾಘವೇಂದ್ರ ಸುಹಾಸ ಅವರು ಕಳೆದ ವರ್ಷ ಮಹಾಮಳೆಯಿಂದ ಪ್ರವಾಹ ಸಂಕಷ್ಟಕ್ಕೆ ಒಳಗಾದಾಗ ಪ್ರತಿದಿನ 10 ಸಾವಿರ ಪೊಲೀಸ್ ಸಿಬ್ಬಂದಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸಿದ್ದಾರೆ. ಅವರಿಗಾದ ಪ್ರತಿಯೊಂದು ಅನುಭವಗಳನ್ನು ಹಾಗೂ ಮುಂದೆ ಇಂತಹ ಸಂಕಷ್ಟ ಬಂದರೆ ಯಾವ ತರಹ ಎದುರಿಸಬೇಕು ಎಂದು ಅವರೆ ಸ್ವತಹ ಬರೆದ “ಕೆಂಪೆಚ್ಚರದ ಆಚೆಗೆ’’ (ಜೀವ ರಕ್ಷಣೆ) ಎಂಬ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಿ ಮಾತನಾಡಿ ಇದೆ ವೇಳೆ ಪ್ರವಾಹ ಸಂದರ್ಭದಲ್ಲಿ ಕಾರ್ಯನಿರ್ವಹಿಸುವಾಗ ವೀರ ಮರಣ ಅಪ್ಪಿದ ಕಿತ್ತೂರು ಪಿಎಸ್‍ಐ ಈರಣ್ಣ ಲಟ್ಟಿ ಅವರನ್ನು ನೆನಪಿಸಿಕೊಂಡರು.

ಈ ವೇಳೆ ನೂತನ ಕಾಡಾ ಅಧ್ಯಕ್ಷ ಮಾಜಿ ಶಾಸಕ ವ್ಹಿ.ಆಯ್. ಪಾಟೀಲ, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕಿತ್ತೂರು ಭಾಜಪಾ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ತಾ.ಪಂ. ಅಧ್ಯಕ್ಷೆ ಚನ್ನಮ್ಮಾ ಹೊಸಮನಿ, ಸರ್ವ ಸದಸ್ಯರು, ಪ.ಪಂ ಅಧ್ಯಕ್ಷ ಹನುಮಂತ ಲಂಗೋಟಿ, ಉಪಾಧ್ಯಕ್ಷೆ ಶೋಭಾ ದರ್ಶಿ, ಸರ್ವ ಸದಸ್ಯರು, ಚುನಾಯಿತ ಪ್ರತಿನಿಧಿಗಳು ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇನೂ ಅನೇಕರ ಇದ್ದರು.