ಸದೃಢ ಆರೋಗ್ಯಕ್ಕಾಗಿ ಸೈಕಲ್ ಜಾಥಾ : ಎ.ಡಿ.ಜಿ.ಪಿ ಅಲೋಕ್ ಕುಮಾರ

0

ಬೆಳಗಾವಿ, ಡಿ.2 : ಕೆ.ಎಸ್.ಆರ್.ಪಿ ಉತ್ಸವ ಹಾಗೂ ಕೊವಿಡ್-19 ಜಾಗೃತಿ ಮೂಡಿಸಲು ಬುಧವಾರ(ಡಿ.2) ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ. ಅಲೋಕ್ ಕುಮಾರ್ ಅವರು ಸುವರ್ಣ ಸೌಧ ಮೆಟ್ಟಿಲುಗಳ ಮುಂಭಾಗದಿಂದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೈಕಲ್ ಜಾಥಾ ಸುವರ್ಣಸೌಧದಿಂದ ಹೊರಟು ಎನ್.ಎಚ್-4 ಮಾರ್ಗವಾಗಿ, ಅಶೋಕ ವೃತ್ತ, ಆರ್.ಟಿ.ಓ ವೃತ್ತ ಮುಖಾಂತರ ರಾಣಿ ಚನ್ನಮ್ಮ ವೃತ್ತವನ್ನು ತಲುಪಿತು. ಎ.ಡಿ.ಜಿ.ಪಿ ಅಲೋಕ್ ಕುಮಾರ್ ಅವರು ರಾಣಿ ಚನ್ನಮ್ಮಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.


ಚನ್ನಮ್ಮ ವೃತ್ತದಿಂದ ಸೈಕಲ್ ಜಾಥಾ ಕಾಲೇಜ್ ರಸ್ತೆ, ಕಾಂಗ್ರೆಸ್ ರಸ್ತೆ, ಉದ್ಯಮಬಾಗ ರೋಡ್ ಹಾಗೂ ಪೀರನವಾಡಿ ಮಾರ್ಗವಾಗಿ ಕೆ.ಎಸ್.ಆರ್.ಪಿ 2ನೇ ಪಡೆ ಆವರಣ ಬಂದು ತಲುಪಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ ಅಲೋಕ್ ಕುಮಾರ ಅವರು ಒತ್ತಡದಿಂದ ನಾಗರಿಕರಿಗೆ ಮಾನಸಿಕ ನೆಮ್ಮದಿಯೇ ಸಿಗುತ್ತಿಲ್ಲ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಹೀಗಾಗಿ ಸದೃಢ ಆರೋಗ್ಯವನ್ನು ಬೆಳೆಸಿಕೊಳ್ಳಬೇಕಾದರೆ ದಿನಕ್ಕೆ ನಾಲ್ಕೈದು ಕಿಲೋಮೀಟರ್ ಸೈಕಲ್ ಸವಾರಿ ಮಾಡಬೇಕು. ಸೈಕಲ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯ ಎಂದು ಸೈಕಲ್ ಸವಾರರಿಗೆ ಕಿವಿ ಮಾತು ಹೇಳಿದರು.


ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಕೆ.ಎಸ್.ಆರ್.ಪಿ. 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್, ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಮೇಶ ಎ.ಬೋರಗಾವೆ,

ಕೆ.ಎಸ್.ಆರ್.ಪಿ 2ನೇ ಪಡೆಯ ಅಧಿಕಾರಿ ಸಿಬ್ಬಂದಿಗಳು ಬೆಳಗಾವಿಯ ಸಂಘ-ಸಂಸ್ಥೆಗಳಾದ ಬೆಳಗಾವಿ ಜಿಲ್ಲೆ ಸೈಕ್ಲಿಂಗ್ ಕ್ಲಬ್, ಬೆಳಗಾವಿಯ

ಎನ್.ಸಿ.ಸಿ ವಿಭಾಗ, ಕೆ.ಎಸ್.ಐ.ಎಸ್.ಎಫ್, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಸಿ.ಆರ್.ಪಿ.ಎಫ್ ಕೋಬ್ರಾ ಕ್ಯಾಂಪ್, ಐ.ಟಿ.ಬಿ.ಪಿ ತರಬೇತಿ ಶಾಲೆ, ಮ್ಯಾರಾಥಾನ್ ಬಾಯ್, ಬೆಳಗಾವಿ ಪೆಡ್ಲರ್ ಕ್ಲಬ್, ಡಿವೈನ್ ಮರ್ಸಿ ಶಾಲೆ, ಸಿ.ಎಂ.ವಿ – ಐಎಎಸ್ ತರಬೇತಿ ಅಕಾಡೆಮಿ ಬೆಳಗಾವಿ, ವೇಣುಗ್ರಾಮ್ ಸೈಕಲ್ ಕ್ಲಬ್ ಹಾಗೂ ನಗರದ ಸಾರ್ವಜನಿಕರು ಭಾಗವಹಿಸಿದ್ದರು.