“TULIP ಕಾರ್ಯಕ್ರಮದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ”

0

“TULIP ಕಾರ್ಯಕ್ರಮದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ”

ಬೆಳಗಾವಿ, ಡಿ.2 : ವಿವಿಧ ಇಲಾಖೆಗಳಲ್ಲಿನ ನಿರ್ಣಾಯಕ ಸವಾಲುಗಳನ್ನು ಹೊಸಕಲ್ಪನೆ ಮತ್ತು ಶಕ್ತಿಯೊಂದಿಗೆ ಪರಿಹರಿಸಲು ಹಾಗೂ ಅಲ್ಪಕಾಲಾವಧಿಯಲ್ಲಿ ಪದವಿ ಪಡೆಯುತ್ತಿರುವ ಮತ್ತು ಹೊಸ ಪದವೀಧರರ ವೃತ್ತಿ ಕೌಶಲ್ಯವನ್ನು ಅನುಭವಕಲಿಕೆಯೊಂದಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟಸಿಟಿ ಯೋಜನೆಯಡಿಯಲ್ಲಿ TULIP (The Urban Learning Internship Program) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಬೆಳಗಾವಿಯ ವಿವಿಧ ಇಲಾಖೆಗಳಲ್ಲಿ “TULIP ಕಾರ್ಯಕ್ರಮದಡಿ ಕಾರ್ಯನಿರ್ವಹಿಸಲು Civil, Architecture, Electrical, B.Com, Computer Science, IT, Safety Engineering, Environmental Engineering ಇತ್ಯಾದಿ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಂದ ಡಿಸೆಂಬರ್ 18 ರ ಸಂಜೆ :5.30 ಗಂಟೆಯೊಳಗಾಗಿ ಅರ್ಜಿ ಆಹ್ವಾನಿಸಲು ಕೋರಲಾಗಿದೆ.
ಈ ಕುರಿತು ಹೆಚ್ಚಿನ ವಿವರಗಳನ್ನು ಬೆಳಗಾವಿ ಸ್ಮಾರ್ಟಸಿಟಿ ಲಿಮಿಟೆಡ್‍ನ ಅಧಿಕೃತ ಅಂತರ್ಜಾಲ ತಿತಿತಿ.bsಛಿಟ.iಟಿ ನಲ್ಲಿ ಲಭ್ಯವಿರುತ್ತವೆ. ಆಸಕ್ತರು ತಮ್ಮ ಸ್ವ-ವಿವರ ಮತ್ತು ದಾಖಲೆಗಳೊಂದಿಗೆ ಅರ್ಜಿಯನ್ನು ಸಂಪರ್ಕಿಸಲು ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. /////

ಡಿಸೆಂಬರ್ 19 ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ

ಬೆಳಗಾವಿ, ಡಿ.2 : ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಡಿಸೆಂಬರ್ 19 ರಂದು ಬೆಳಿಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುವುದು. ಸಭೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಒಕ್ಕೂಟದ ಆವರಣದಿಂದ ವರ್ಚುವಲ್ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದ್ದು, ಒಕ್ಕೂಟದ ಅಧ್ಯಕ್ಷರಾದ ವಿವೇಕ್ ವಸಂತರಾವ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಿದ್ದಾರೆ.
ಆಯಾ ತಾಲೂಕುವಾರು ವಿಡಿಯೋ ಕಾನ್ಫರೆನ್ಸ್ ನಡೆಯುವ ಸ್ಥಳಗಳು: ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಅಥಣಿ ಮತ್ತು ಕಾಗವಾಡ ತಾಲೂಕುಗಳಿಗೆ (ರಾಯಬಾಗ ಹಿಲ್ ಸ್ಟೇಶನ್ ಹಾಲ್‍ನಲ್ಲಿ) ಗೋಕಾಕ, ಮೂಡಲಗಿ ಮತ್ತು ರಾಮದುರ್ಗ ತಾಲೂಕುಗಳಿಗೆ (ಗೋಕಾಕ ಸಮುದಾಯ ಭವನ ಬಸವ ನಗರ) ಹುಕ್ಕೇರಿ, ಬೆಳಗಾವಿ ಮತ್ತು ಖಾನಾಪೂರ ತಾಲೂಕುಗಳಿಗೆ (ಬೆಳಗಾವಿ ಮಹಾಂತ ಭವನ ಮಹಾಂತೇಶ ನಗರ) ಹಾಗೂ ಸವದತ್ತಿ, ಕಿತ್ತೂರ ಮತ್ತು ಬೈಲಹೊಂಗಲ ತಾಲೂಕುಗಳಿಗೆ (ಬೈಲಹೊಂಗಲ ಶಿವಬಸವ ಕಲ್ಯಾಣ ಮಂಟಪ)ದಲ್ಲಿ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗಿದೆ.
ಎಲ್ಲ ಸದಸ್ಯರು ಕರ್ನಾಟಕ ಸರ್ಕಾರದ ನಿಯಮಾವಳಿಗಳಂತೆ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಗೆ ಹಾಜರಾಗಬೇಕು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಉಬೇದುಲ್ಲಾ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//.//