ಬೆಳಗಾವಿ ಜಿಲ್ಲೆ ಯೋಧ ಆತ್ಮಹತ್ಯೆ

ಜಮ್ಮು ಕಾಶ್ಮೀರದಲ್ಲಿ ಬೆಳಗಾವಿ ಜಿಲ್ಲೆ ಯೋಧ ಆತ್ಮಹತ್ಯೆ

0

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಯೋಧ ಜಮ್ಮು ಕಾಶ್ಮೀರ ಸೋಫಿಯಾ ಜಿಲ್ಲೆಯ ಔರಾ ಗ್ರಾಮದಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಯೋಧನನ್ನು ನೇರ್ಲಿ ಗ್ರಾಮದ ಯೋಧ ಚಂದ್ರಾ ಉರ್ಫ ಚೇತನ ಪಾಟೀಲ ಎಂದು ಗುರುತಿಸಲಾಗಿದೆ. ಈ ಯೋಧ ಹಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕ್ರಿಯೆ ಪೂರೈಸಿದ್ದು, ಯೋಧನ ಶವವನ್ನು ಭಾರತೀಯ ಸೈನ್ಯಕ್ಕೆ ಹಸ್ತಾಂತರಿಸಿದ್ದಾರೆ.

ಆದರೆ ಮೃತ ಯೋಧನ ಶವವನ್ನು ಬೆಳಗಾವಿ ಜಿಲ್ಲೆಗೆ ತರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹುಕ್ಕೇರಿ ತಾಲೂಕು ಆಡಳಿತ ತಿಳಿಸಿದೆ.