ನೀಡಿದ ಬಂದ್ ಕರೆಗೆ ಬೆಳಗಾವಿಯ ಜನ ಕ್ಯಾರೆ ಅನ್ನಲಿಲ್ಲ,

0

ಬೆಳಗಾವಿ- ಬೆಳಗಾವಿ-ಪ್ರತಿಯೊಂದು ಮಾತಿಗೂ ಬಂದ್..ಬಂದ್..ಬಂದ್..ಎನ್ನುವ ವಾಟಾಳ್ ನಾಗರಾಜ್ ಅವರು ನೀಡಿದ ಬಂದ್ ಕರೆಗೆ ಬೆಳಗಾವಿಯ ಜನ ಕ್ಯಾರೆ ಅನ್ನಲಿಲ್ಲ,ಬೆಳಗಾವಿಯಲ್ಲಿ ಬಂದ್ ಕರೆಗೆ ರಿಸ್ಪಾನಸ್ಸೇ ಸಿಗಲಿಲ್ಲ.

ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ.
ಕರ್ನಾಟಕ ಬಂದ್ ಕರೆಗೆ ಬೆಳಗಾವಿಯ ಜನ ಬೆಂಬಲ ಕೊಡಲಿಲ್ಲ. ಬೆಳಗಾವಿಯಲ್ಲಿ ಎಂದಿನಂತೆ ಬಸ್ ಸಂಚಾರ ನಡೆದಿದೆ.

ಮಾರ್ಕೆಟ್ ಶುರುವಾಗಿದೆ.ಅಟೋಗಳು ರಸ್ತೆಗಿಳಿದಿವೆ.ಅಂಗಡಿಗಳು ತೆರೆದಿವೆ, ಬೆಳಗಾವಿಯಲ್ಲಿ ಸಿಎಂ ಸೇರಿ ಹಲವು ಸಚಿವರ ವಾಸ್ತವ್ಯ ಹಿನ್ನೆಲೆಯಲ್ಲಿ
ಕನ್ನಡ ಪರ ಸಂಘಟನೆಗಳಿಗೆ ಕೇವಲ ಪ್ರತಿಭಟನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕರವೇ ನಾರಾಯಣಗೌಡ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಯಲಿದೆ,
ಕರವೇ ಸೇರಿ ಇತರೆ ಸಂಘಟನೆಗಳಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ
ಆಟೋ, ಬಸ್ ಸೇರಿ ಯಾವುದೇ ಸಂಘಟನೆಯಿಂದ ಬಂದ್ ಗೆ ಬೆಂಬಲ ದೊರೆತಿಲ್ಲ,ಹೀಗಾಗಿ ಬೆಳಗಾವಿ ಬಂದ್ ಇಲ್ಲಾ…ಮಾಮು