ಬೆಳಗಾವಿ: ಯಮಕನಮರಡಿ ಮತ ಕ್ಷೇತ್ರ ವ್ಯಾಪ್ತಿಯ ಆಲದಾಳ ಗ್ರಾಮದಲ್ಲಿ ಆಲದಾಳ್ ಕ್ರಿಕೆಟ್ ಕ್ಲಬ್ ವತಿಯಿಂದ
ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಶನಿವಾರ ಚಾಲನೆ ನೀಡಿದರು.
ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯುವಜನತೆಗೆ ಮೊಬೈಲ್ ಗೀಳಿಗೆ ಮಾರು ಹೋಗದೆ ಕ್ರಿಕೇಟ್, ಕಬ್ಬಡ್ಡಿ, ವಾಲಿಬಾಲ್ ನಂತಹ ಕ್ರೀಡೆಗಳಲ್ಲಿ ಒಲವು ತೋರಬೇಕು.
ಕ್ರೀಡಾಕೂಟಗಳಲ್ಲಿ ಭಾಗಿವಹಿಸುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ನಿಂಗಪ್ಪ ಗುರವ, ಭೀಮಾ ಪಾಟೀಲ್, ಕಲ್ಲಪ್ಪ , ಸುಖದೇವ, ಸುನೀಲ್, ಲಗಮಾ, ಬಾಳೇಶ್, ಸದಾನಂದ ಸೇರಿದಂತೆ ಮುಂತಾದವರು ಇದ್ದರು.