ಚನ್ನಮ್ಮನ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕಗೊಳಿಸಲು ಆಗ್ರಹ

0

ಬೈಲಹೊಂಗಲ: ಸೂರ್ಯ ಮುಳುಗದ ಸಾಮ್ರಾಜ್ಯ ಎದುರೆ ಕೆಚ್ಚೆದೆಯಿಂದ ಹೋರಾಡಿ ವೀರ ಮರಣ ಹೊಂದಿದ ವೀರರಾಣಿ

ಕಿತ್ತೂರು ಚನ್ನಮ್ಮನವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ದೊಡಮನಿ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ತೇಜಸ್ವಿ ಸೂರ್ಯಾ ಅವರನ್ನು ಭೇಟಿ ಮಾಡಿದ ಕಾರ್ಯದರ್ಶಿಗಳು, ಬಿಜೆಪಿ ಕಾರ್ಯಕರ್ತರು ಐತಿಹಾಸಿಕ ಸ್ಥಳವಾಗಿರುವ ಚನ್ನಮ್ಮನ ಸಮಾಧಿ ಸ್ಥಳದ ಮಹತ್ವದ, ಕುರುಹು ಬಗ್ಗೆ ಮನವರಿಕೆ ಮಾಡಿದರು.

ಕನ್ನಡಿಗರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಬ್ರಿಟಿಷರನ್ನು ಹೊಡೆದೋಡಿಸಿದ ತಾಯಿ ಚನ್ನಮ್ಮನ ಕಿತ್ತೂರು ಸಂಸ್ಥಾನದ ಹಿರಿಮೆ, ಗರಿಮೆಯನ್ನು ವಿವರಿಸಿದರು. ವೀರವನಿತೆ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಕಿತ್ತೂರು ಸಂಸ್ಥಾನದ ವೀರಸೇನಾನಿಗಳ ಕೊಡುಗೆಯನ್ನು ತಿಳಿಸಿದರು.

ಬೈಲಹೊಂಗಲ, ಬೆಳಗಾವಿ ಜನರ ಬಹುದಿನದ ಬೇಡಿಕೆಯಾಗಿರುವ ಚನ್ನಮ್ಮನ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸಾಕಷ್ಟು ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ಯಾವುದೇ ಸರ್ಕಾರ, ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಅನೇಕ ರಾಜಕಾರಣಿಗಳು, ಗಣ್ಯಮಾನ್ಯರು ಭೇಟಿ ನೀಡಿದ ವೇಳೆಯಲ್ಲಿ ಭರವಸೆ ನೀಡಿದ್ದಾರೆ ವಿನರ್ಹ ಕಾರ್ಯ ರೂಪಕ್ಕೆ ತಂದಿಲ್ಲ.

ಹೀಗಾಗಿ ತಾವು ಈ ವಿಷಯವನ್ನು ಗಂಭೀರವಾಗಿ ಪರಿಣಿಸಿ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆದು ಚನ್ನಮ್ಮನ ಶೌರ್ಯ, ಸಾಹಸ, ದೇಶಾಭಿಮಾನ ಜಾಗೃತಿಗೊಳಿಸಿ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು. ಸುರೇಶ ಖಡಿ ಇದ್ದರು.