ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಗೆ ಕುಳಿತಿದ್ದ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್

0

ಲಖನೌ: ಕೃಷಿ ಕಾಯ್ದೆಗಳನ್ನು ವಿರೋಧಿಸಿ  ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿನ  11 ದಿನಕ್ಕೆ ಕಾಲಿರಿಸಿದ್ದು,  ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಗೆ ಕುಳಿತಿದ್ದ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ರೈತರ ಪ್ರತಿಭಟನೆಗೆ ದೇಶ್ಯಾದ್ಯಂತ ಹಲವರು  ನಾಯಕರು  ಕೈಜೋಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಅಖಿಲೇಶ್​ ಯಾದವ್ ಸಮಾಜವಾದಿ ಪಕ್ಷದ ಕಾರ್ಯಕರ್ತರೊಂದಿಗೆ​​ ಕನೌಜ್​​​ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರ್ಯಾಲಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆಯೇ ಪೊಲೀಸರು ಅವರನ್ನ ತಡೆದರು.

ನಮ್ಮನ್ನ ಜೈಲಿಗೆ ಹಾಕಿದ್ರೂ ಪರವಾಗಿಲ್ಲ, ನಮ್ಮ ವಾಹನಗಳನ್ನ ತಡೆದಿದ್ದಾರೆ. ನಾವು ಕಾಲ್ನಡಿಗೆಯಲ್ಲೇ ಹೋಗ್ತೀವಿ ಎಂದು ಅಖಿಲೇಶ್​ ಯಾದವ್​ ಪಟ್ಟುಹಿಡಿದಿದ್ದರು.

ಬಳಿಕ ತಮ್ಮ ನಿವಾಸದ ಮುಂದೆಯೇ ಧರಣಿ ಕುಳಿತರು. ಹೀಗಾಗಿ ಪೊಲಿಸರು ಅವರನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಅಖಿಲೇಶ್​​ರನ್ನ ಈಕೋ ಗಾರ್ಡನ್​​​ಗೆ ಕರೆದೊಯ್ದಿದ್ದು, ಅಲ್ಲಿ ಕಸ್ಟಡಿಯಲ್ಲಿ ಇರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇನ್ನು ನಾಳೆ ಭಾರತ ಬಂದ್ ಕರೆ ನೀಡಲಾಗಿದ್ದು, ಬಂದ್ ಹಲವು ಸಂಘಟನೆಗಳು  ಬೆಂಬಲ ಸೂಚಿಸಿವೆ.