ಮುಖ್ಯೋಪಾಧ್ಯಾಯರ ಸಮಸ್ಯೆ ಗಳ ಕುರಿತು ಆಪ್ತ ಸಮಾಲೋಚನೆ

0

ಬೆಳಗಾವಿ ೦7:: ಬೆಳಗಾವಿ ನಗರದ ಶಿವಾಜಿ ನಗರದ ಶಿಕ್ಷಕರ ಸೊಸೈಟಿ ಕಾಯಾ೯ಲಯದಲ್ಲಿ ರವಿವಾರ ದಿ6 ರಂದು ನಡೆದ ಸರ್ಕಾರಿ ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು, ಮತ್ತು ಎನ್ ಪಿ ಎಸ್ ಶಿಕ್ಷಕರ ಆಪ್ತ ಸಮಾಲೋಚನೆ ಸಮಾರಂಭ ದಿನಪೂರ್ತಿ ಜರುಗಿತುಪ್ರಧಾನ ಗುರುಗಳ ದಿನ ನಿತ್ಯ ಎದುರಿಸುತ್ತಿರುವ, ಸಮಸ್ಯೆಗಳು, ಮತ್ತು ತೊಂದರೆಗಳ ಬಗ್ಗೆ ಬಹಳಷ್ಟು ವಿಚಾರ ಗಳನ್ನು ವಿವರಿಸಿದರು.

ಪ್ರಧಾನಗುರುಗಳ ಪ್ರತ್ಯೇಕ ವೇತನ ಶ್ರೇಣಿ ಜಾರಿ ಕುರಿತು ಒತ್ತಾಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು,ಶಾಲಾ ಅನುದಾನ ಹೆಚ್ಚಿಸುವುದು,ಪ್ರಧಾನ ಗುರುಗಳಿಗೆ ಹೆಚ್ಚಿನ ಅಧಿಕಾರ ನೀಡುವುದು,ದಿನ ನಿತ್ಯ ಕಾಗದ ಪತ್ರಗಳ ಮಾಹಿತಿ ನೀಡುವುದನ್ನುಹೋಗಲಾಡಿಸಿ,ಸರಳೀಕರಿಸಿ ಕಾಗದ ಪತ್ರಗಳ ಮಾಹಿತಿ ಕಡಿಮೆ ಮಾಡುವುದು,ಮೊದಲಿನಂತೆ ಶಿಕ್ಷಕರಿಗೆ ಅನುದಾನ ನೀಡುವುದು,

ಸೇರಿದಂತೆ ಇನ್ನೂ ಹತ್ತು ಹಲವಾರು,ಜ್ವಲಂತ ಸಮಸ್ಯೆ ಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಯಿತು,ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕರಾದ ಎಸ್ ಡಿ ಗಂಗಣ್ಣವರ ಮಾತನಾಡಿ ಮುಖ್ಯೋಪಾಧ್ಯಾಯರ ಎಲ್ಲ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು ,

ಅವುಗಳನ್ನು ಸರ್ಕಾರದ ಹಂತದಲ್ಲಿ ಕೆಲವು ಜಿಲ್ಲಾ ಹಂತದಲ್ಲಿ ದ್ದು,ರಾಜ್ಯ ಶಿಕ್ಷಕ ಸಂಘ ಮುಂದಿನ ದಿನಗಳಲ್ಲಿ ಪರಿಹರಿಸುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು ಮುಂದಿನ ದಿನಗಳಲ್ಲಿ,ನಗರ ವಲಯದ ಗುರುಸ್ಪಂದನ ಪ್ಯಾನೆಲ ನಲ್ಲಿ, ಆಡಳಿತ

ಅನುಭವವಿರುವ,ಶಿಕ್ಷಕರ ಕಾಳಜಿ ವಹಿಸುವ ಪ್ರಾಮಾಣಿಕ ಸೇವೆ ಸಲ್ಲಿಸುವ, ಶಿಕ್ಷಕ ಸಂಘದಲ್ಲಿ ಅನುಭವವಿರುವ, ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಿದ್ದು,ಮತ್ತುಎನ್ ಪಿ ಎಸ್ ಶಿಕ್ಷಕರ ಸಮಸ್ಯೆ ಗಳ ಕುರಿತು ಹೋರಾಟ ಮನೋಭಾವನೆ ಇರುವ, ಪ್ರಾಮಾಣಿಕ ಅಭ್ಯರ್ಥಿಗ ಳನ್ನು ಚುನಾವಣೆ ಗೆ ನಿಲ್ಲಿಸು ತ್ತಿದ್ದು,ಗುರುಸ್ಪಂದನ ಪ್ಯಾನೆಲ್ ನನ್ನು ಆಶೀರ್ವ ದಿಸಿ ಪ್ರಚಂಡ ಮಾತುಗಳಿಂದ ಜಯಗಳಿಸಲು,ಕರೆ ನೀಡಿ ವಿನಂತಿಸಿಕೊಂಡರು,

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ , ಬಸವರಾಜ ಸುಣಗಾರ ಮಾತನಾಡಿ ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಸಲ ಮುಖ್ಯೋಪಾಧ್ಯಾಯರ ಬಡ್ತಿ ಪ್ರಕ್ರಿಯೆ ನಡೆಸುವುದು,ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ದೊರಕಿರುವುದು, ವೇತನ ವ್ಯತ್ಯಾಸ ಸರಿಪಡಿಸುವುದು, ಸೇರಿದಂತೆ ವಿವಿಧ ಸಮಸ್ಯೆ ಗಳನ್ನು ಸರಕಾರ ಹಾಗೂ ಇಲಾಖೆ ಗಮನಕ್ಕೆ ತರಲಾಗಿದೆ ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿವೇ ಎಂದರು,

ಜಿಲ್ಲೆಯ ಶಿಕ್ಷಕರ ಸಂಘದ ಆಡಳಿತದಲ್ಲಿ ಬದಲಾವಣೆ ಬಹಳಷ್ಟು ಶಿಕ್ಷಕರು ಬಯಸಿದ್ದು,ಹೀಗಾಗಿ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗುರುಸ್ಪಂದನ ಪ್ಯಾನೆಲ್ ಗೆ ಮತ ನೀಡುವಂತೆ ಕೋರಿದರು.

ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಿಕ್ಷಕರ ಸೊಸಾಯಿಟಿ ಅಧ್ಯಕ್ಷ ಶೇಖರ ಕರಂಬಳಕರ,ಬೈಲಹೊಂಗಲ ತಾಲೂಕಾ ನೌಕರರ ಸಂಘದ ಅಧ್ಯಕ್ಷ ರಾದ ಶಿವಾನಂದ ಕುಡ ಸೋಮನ್ನವರ, ಶಿಕ್ಷಕರ ಸೊಸೈಟಿ ಮಾಜಿ ಅಧ್ಯಕ್ಷ ರಾದ ಅನ್ವರ್ ಲಂಗೋಟಿ ,ಬಿ ಎಸ್ ಫಕೀರಸ್ವಾಮಿಮಠ,ಎಸ್ ಸಿ ಎಸ್ ಟಿ ಶಿಕ್ಷಕರ ರಾಜ್ಯ ಉಪಾಧ್ಯಕ್ಷರಾದ ಭರತಬಳ್ಳಾರಿ ,ಮುಖ್ಯೋಪಾಧ್ಯಾಯರ ಸಂಘದ ನಗರಾಧ್ಯಕ್ಷ ರಾದ ಅಜು೯ನ ಡಿ ಸಾಗರ, ಹಿರಿಯ ಸಂಘಟಕರಾದ ಎ ಎಮ್ ಪಟೇಲ್ ಮಾತನಾಡಿ ಜಿಲ್ಲೆಯಲ್ಲಿ ಗುರು ಸ್ಪಂದನ ಪ್ಯಾನೆಲ್ ದ ಕೆಲಸ ಕಾರ್ಯಗಳನ್ನು ವಿವರಿಸಿ ಮುಂದಿನ ಚುನಾವಣೆಯಲ್ಲಿ ಮತ ಹಾಕಲು ವಿನಂತಿಯನ್ನು ಮಾಡಿದರು ಪ್ರಾರಂಭದಲ್ಲಿ ದಾಸ ಶ್ರೇಷ್ಠ ರಾದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಮಹಾನ್ ಕಾಯ೯ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.

ನೌಕರರ ಸಂಘದ ಕಾಯ೯ಕಾರಿ ಸದಸ್ಯ ರಾದ ಅಸೀಫ್ ಅತ್ತಾರ ಸ್ವಾಗತಿಸಿದರು ಗುರು ಸ್ಪಂದನ ಶಿಕ್ಷಕರ ಬಳಗದ ನಗರ ಘಟಕದ ಅಧ್ಯಕ್ಷರಾದ ಕುಮಾರಸ್ವಾಮಿ ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯ ಉದ್ದೇಶ ವಿವರಿಸಿದರು ಶಿಕ್ಷಕರ ಸಂಘದ ಮುಖಂಡರಾದ ರಾಜು ಕೋಲಕಾರ ವಂದಿಸಿದರು, ಮುಖ್ಯೋಪಾಧ್ಯಾಯರಾದ ಬಸವರಾಜ ಹಟ್ಟಿಹೋಳಿ ಕಾಯ೯ಕ್ರಮ ನಿವ೯ಹಿಸಿದರು, ಸಂಚಾಲಕ ಮಂಡಳಿ ಮುಖಂಡರಾದ,ರಮೇಶ್ ಸಿಂಗದ ಸುನೀಲ್ ದೇಸೂರಕರ , ರಾಜೇಂದ್ರ ಗೋಶ್ಯಾನಟ್ಟಿ, ಎಮ್ ವಾಯ್

ಮೇನಸಿನಕಾಯಿ,ಕೇಳಗೇರಿ,ಮಹಾಂತೇಶ ವಾಲೀಕಾರ, ಶಿಂಗೇನವರ, ಆಸ್ಮಾ ನಾಯಕ, ಶೇಖಮ್ಮನವರ, ಅಕ್ಕಮಹಾದೇವಿ ಹುಲಗಬಾಳಿ,ಶೋಭಾ ದೇಗಲೋಳ್ಳಿ, ಸವಿತಾ ಹಾಲಪ್ಪನವರ,ಟಿ ಎನ್ ವಡಗಾಂವಕರ, ಆಯ. ಬಿ. ಕಂಚಿಮಠ, ರಾಜೇಂದ್ರ ಕುಮಾರ ಚಲವಾದಿ, ಸೋಮಶೇಖರ್ ಮಾರೀಹಾಳ, ಅಜು೯ನ ಸೊಂಟಕ್ಕಿ,ಎಮ್ ಬಿ ರಾವಳ, ಎಮ್ ಬಿ ಮರಲಕ್ಕನವರ ಸೇರಿದಂತೆ ನಗರ ವಲಯದ ಮುಖ್ಯಾಧ್ಯಾಪಕರು ಸೇರಿದಂತೆ,ಎನ್ ಪಿ ಎಸ್ ಶಿಕ್ಷಕರು,ಗುರುಸ್ಪಂದನ ಕಾರ್ಯಕರ್ತರು, ಗುರು ಹಿರಿಯರು ಭಾಗವಹಿಸಿ ಸಭೆಯ ಯಶಸ್ವಿಗೆ ಕಾರಣೀಕರ್ತರಾದರು. //