ಪೊಲೀಸರ ಮೇಲೆ ಹಲ್ಲೆ ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ಅವರ ಪುತ್ರ ಸೇರಿ ಮೂವ ರನ್ನು ವಶಕ್ಕೆ

0

ಬೆಂಗಳೂರು, ಡಿ. 7- ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ಅವರ ಪುತ್ರ ಸೇರಿ ಮೂವ ರನ್ನು ವಶಕ್ಕೆ ಪಡೆಯಲಾಗಿದೆ.

ಕಾಂಗ್ರೆಸ್ ಎಂಎಲ್​​ಸಿ ನಾಸೀರ್ ಅಹ್ಮದ್ ಪುತ್ರ ಪಯಾಜ್ ಹಾಗೂ ಆತನ ಸ್ನೇಹಿತರು ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು. ಈ ಹಿನ್ನೆಲೆ ಹೆಬ್ಬಾಳದ ಬಿಎಂಟಿಸಿ ಡಿಪೋ ಬಳಿ ಬರುತ್ತಿದ್ದ ವೇಳೆ ಕಾರು ತಡೆದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಇಬ್ಬರು ಪೊಲೀಸರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯಪಾನ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ನಾಸಿರ್ ಅಹಮದ್ ಅವರ ಪುತ್ರ ಫಯಾಜ್ ಅಹಮದ್ ಸೇರಿದಂತೆ ಮೂವರು ಪೊಲೀಸರ ಮೇಲೆ ಏಕಾಏಕಿ ಹಲ್ಲೆ ‌ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಕ್ಷಣ ಸ್ಥಳಕ್ಕೆ ಹೊಯ್ಸಳ ಕರೆಸಿ ಹಲ್ಲೆ ನಡೆಸಿದ ಮೂವರನ್ನೂ ವಶಕ್ಕೆ ಪಡೆದಿರುವ ಅಮೃತಹಳ್ಳಿ‌ ಪೊಲೀಸರು ಸದ್ಯ ತನಿಖೆ ಮುಂದುವರೆಸಿದ್ದಾರೆ. ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.