ಗೊಡಚಿ ವೀರಭಧ್ರೇಶ್ವರ ದೇವಸ್ಥಾನ ಜನೇವರಿ 3 ರವರೆಗೆ ಸಾರ್ವಜನಿಕ ಭಕ್ತರ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ

0

ಬೆಳಗಾವಿ ಡಿ.7: ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -19 ಕರೋನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಭಕ್ತಾದಿಗಳ ದರ್ಶನವನ್ನು ಡಿಸೆಂಬರ್ 06 ರಿಂದ ಜನೇವರಿ 3 ರವರೆಗೆ ನಿಷೇಧಿಸಿ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶ ಹೊರಡಿಸಿದ್ದರು.

ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರಡಿ ಡಿಸೆಂಬರ್ 18 ರಿಂದ ಜನೇವರಿ 3 ರವರೆಗೆ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗುವ ಜಾತ್ರಾ ಮಹೋತ್ಸವವನ್ನು ದೇವಾಲಯದ ಆಗಮಿಕರು, ತಂತ್ರಿಗಳು ಹಾಗೂ ಅರ್ಚಕರು ದೇವಾಲಯದ ಸಿಬ್ಬಂದಿಗಳು ಸರಳ ಹಾಗೂ ಸಾಂಕೇತಿಕವಾಗಿ ದೇವಾಲಯದ ಆವರಣ ಒಳಪ್ರಕಾರದೊಳಗೆ ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸುವುದು.

ಜಾತ್ರಾ ಮಹೋತ್ಸವದ ಅವಧಿ ಡಿಸೆಂಬರ್ 18 ರಿಂದ ಜನೇವರಿ 3 ರವರೆಗೆ ದೇವಸ್ಥಾನದ ಸುತ್ತಮುತ್ತಲಿನ ಸುಮಾರು 1 ಕಿ.ಮೀ ಪ್ರದೇಶದಲ್ಲಿ ಆಟಿಕೆ ಸಾಮಾನುಗಳ ಅಂಗಡಿ, ನಾಟಕ ಮಂದಿರಗಳು, ಬಳೆ ಅಂಗಡಿಗಳು ಹಾಗೂ ಇನ್ನಿತರ ಅಂಗಡಿಗಳನ್ನು ಇಡದಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಿರ್ಬಂಧಿಸಿ ಆದೇಶಿಸಿದ್ದಾರೆ. ///