ಸಶಸ್ತ್ರ ಪಡೆಯ ಧ್ವಜ ದಿನಾಚರಣೆಯ ಅಂಗವಾಗಿ ಧ್ವಜಗಳ ಬಿಡುಗಡೆ

0

ಬೆಳಗಾವಿ ಡಿ.7: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಅಂಗವಾಗಿ ಸಶಸ್ತ್ರ ಪಡೆಗಳ ಧ್ವಜಗಳನ್ನು ಸೋಮವಾರ (ಡಿ.07) ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆಗೊಳಿಸಲಾಗಯಿತು.

ಧ್ವಜ ಬಿಡುಗಡೆಯ ಸಮಾರಂಭದಲ್ಲಿ ಸೈನಿಕ ಮಂಡಳಿಯ ಉಪಾಧ್ಯಕ್ಷರಾದ ಜನರಲ್ ಕೆ.ಎನ್.ಮಿರ್ಜಿ, ವ್ಹಿ.ಎಸ್.ಎಮ್ ಹಾಗೂ ಕಾರ್ಯಾಲಯದ ಜಂಟಿ ನಿರ್ದೇಶಕರಾದ ವಿಂಗ ಕಮಾಂಡರ ಈಶ್ವರ ಕೊಡೊಳ್ಳಿ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.