ಪ್ರಕಟಣೆ

0

ಶರಣಮಟ್ಟಿಯಲ್ಲಿ ಸಾಂಸ್ಕøತಿಕ ಉತ್ಸವ

ಬೆಳಗಾವಿ ಡಿ.7: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ನಾಟ್ಯ ಸರಸ್ವತಿ ಕಲಾ ಪೋಷಕ ಅಕಾಡೆಮಿ, ಹಲಗಾ, ಬೆಳಗಾವಿ ಇವರ ಸಂಯಕ್ತಾಶ್ರಯದಲ್ಲಿ ಶರಣಮಟ್ಟಿಯ ಶಿವಶಕ್ತಿ ಮಠದ ಆವರಣದಲ್ಲಿ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮವನ್ನು ನವ್ಹೆಂಬರ್ 29 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಹಲಗಾ ನಾಟ್ಯ ಸರಸ್ವತಿ ಕಲಾ ಪೋಷಕ ಅಕಾಡೆಮಿ ಅಧ್ಯಕ್ಷರಾದ ರೂಪಾ ರಾಜೇಂದ್ರ ಸುತಾರ ಅವರು ಇಂದಿನ ದಿನಮಾನದಲ್ಲಿ ಜಾನಪದ ಕಲೆಯೂ ನಶೀಸಿಹೋಗುವ ಹಂತದಲ್ಲಿ ಇದ್ದು, ಯುವ ಜನಾಂಗಕ್ಕೆ ಇಂತಹ ಜಾನಪದ ಬಯಲಾಟ ಕಲೆಗಳಂತ ರುಚಿ ಉಣಿಸಿ ಕಲೆಯನ್ನು ಉಳಿಸಿ ಬೆಳೆಸಲು, ಜವಾಬ್ದಾರಿಯುವಾದ ಯುವಜನಾಂಗದ ಹೆಗಲಿಗೆ ಏರಬೇಕಾಗಿದೆ.

ನಾಟ್ಯ ಸರಸ್ವತಿ ಕಲಾ ಪೋಷಕ ಅಕಾಡೆಮಿ, ಹಲಗಾ, ಬೆಳಗಾವಿ ಸಂಘದ ಅಧ್ಯಕ್ಷರಾದ ರೂಪಾ ಸುತಾರ ಇವರು ಸಂಸ್ಥೆಯ ಉದ್ದೇಶ ಹಾಗೂ ಜವಾಬ್ದಾರಿ ಸವಿಸ್ತಾರವಾಗಿ ಮಾತನಾಡಿದರು. ಯುವ ರಂಗ ಕಲಾವಿದರಾದ ಯಲ್ಲಪ್ಪ ನಾಯ್ಕರ ಮಾತನಾಡಿ ಜಾನಪದ ಕಲೆಗಳಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಕೆಲ ಜಾನಪದ ಕಲೆಗಳು ನಶಿಸಿಹೋಗುತ್ತಿವೆ. ಅಂತಹ ಜಾನಪದ ಕಲೆಗಳನ್ನು ಗುರುತಿಸಿ ಈಗಿನ ಯುವ ಪೀಳಿಗೆಗೆ ತರಬೇತಿ ನೀಡಿಬೇಕಾಗಿದೆ ಎಂದರು.

ದಿವ್ಯ ಸಾನಿಧ್ಯವಹಿಸಿದ ವೇದಮೂರ್ತಿ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಮಠ ಮಾನ್ಯಗಳಲ್ಲಿ ಮಾತ್ರ ಜಾನಪದ ಕಲೆಗೆ ಬೆಲೆ ದೊರೆಯುತ್ತಿದ್ದು, ಇಂತಹ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲ ಕಡೆಯೂ ಜಾನಪದ ಕಲೆಯ ಸೊಗಡನ್ನು ಪಸರಿಸಬೇಕೆಂದು ಹೇಳಿದರು. ಇಂತಹ ಸಂಘ ಸಂಸ್ಥೆಗಳಿಗೆ ನಾವು ಹಾಗೂ ಜನಸಾಮಾನ್ಯರು ಕೂಡ ಸಹಾಯಹಸ್ತ ನೀಡಬೇಕೆಂದು ಹೇಳಿದರು.
ಸಾಂಸ್ಕøತಿ ಉತ್ಸವ ಕಾರ್ಯಕ್ರಮದಲ್ಲಿ ಹೆಜ್ಜೆಮೇಳ, ಜೋಗತಿ ನೃತ್ಯ, ಕರಡಿ ಮಜಲು, ಡೊಳ್ಳಿನ ಪದ, ಕಣಿ ವಾದನ, ಕೋಲಾಟ, ದೀಪ ನೃತ್ಯ, ವೀರಗಾಸೆ, ಹಲಗೆ ವಾದನ, ಸೋಬಾನ ಪದ, ಭಜನಾ ಪದ ಬ್ಯಾಂಡ ವಾದನ, ಹಂತಿ ಪದ, ಸಣ್ಣಾಟದ ಪದ, ಭರತನ್ಯಾಟ, ಡೊಳ್ಳಿನ ಪದ ಹಾಗೂ ನಿಜಗುಣಿ ಶೀವಯೋಗಿ ಪೌರಾಣಿಕ ನಾಟಕವು ನಡೆಯಿತು

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಯಲ್ಲಪ್ಪ ನಾಯ್ಕರ ಹಾಗೂ ವಂದಣಾರ್ಪಣೆಯನ್ನು ರಾಜೇಂದ್ರ ಸುತಾರ ಇವರು ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಮೂರ್ತಿ ಬಸವಲಿಂಗ ಮಹಾಸ್ವಾಮಿಗಳು, ಶರಣಮಟ್ಟಿ, ಮುಖ್ಯ ಅತಿಥಿಗಳಾಗಿ ಹಿರಿಯ ಬಯಲಾಟ ಕಲಾವಿದರಾದ ಈಶ್ವರಚಂದ್ರ ಬೇಟಗೇರಿ, ಸುರೇಶ ಭಜಂತ್ರಿ, ಚಿದಂಬರ ಬಡಿಗೇರ, ಎಸ್.ಆರ್. ಚಿನ್ನವಾಲರ, ಸಂತೋಷ ಅವಜಪ್ಪಗೋಳ, ಯಲ್ಲವ್ವ ಕೋಲಕಾರ ನಾಗಪ್ಪ ಬೆಳ್ಳಂಕಿ, ಈರಣ್ಣಾ ರಾಜಗೋಳಿ, ತಾರಾಮತಿ ಬಡಿಗೇರ, ಭಾಗವಹಿಸಿದರು.///

 

ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮೀತಿ ಪ್ರಕಟಣೆ

ಬೆಳಗಾವಿ ಡಿ.7(ಕರ್ನಾಟಕ ವಾರ್ತೆ): ಕರ್ನಾಟಕ ಮುದ್ರಾಂಕ (ಸ್ವತ್ತುಗಳ ಮಾರ್ಗಸೂಚಿ ಮಾರುಕಟ್ಟೆ ಮಾರುಕಟ್ಟೆ ಬೆಲೆಗಳನ್ನು ಅಂದಾಜು ಮಾಡುವ, ಪರಿಷ್ಕರಿಸುವ) ನಿಯಮಗಳು 2003ರ ನಿಯಮ 4 ರನ್ವಯ ಉಪಲಬ್ಧವಿರುವ ಅಧಿಕಾರದನ್ವಯ

ಸವದತ್ತಿ ತಾಲೂಕಿನ ವ್ಯಾಪ್ತಿಯ ಮರಕುಂಬಿ ಗ್ರಾಮದ ರಿ.ಸ.ನಂ.166 ನೇದ್ದರ ಹೊಸಬಡಾವಣೆಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಸವದತ್ತಿ ತಾಲೂಕು ಉಸಮಿತಿಯ ಕೇಂದ್ರ ಮೌಲ್ಯ ಮಾಪನ ಸಮಿತಿಯು ನೀಡಿರುವ ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಮುದ್ರಾಂಕ (ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮೀತಿ ಪ್ರಕಟಣೆ,

ಮಾರುಕಟ್ಟೆ ಮೌಲ್ಯಗಳ ಪರಿಷ್ಕರಣೆ) ನಿಯಮಗಳು 2003 ರನ್ವಯ ಸ್ವತ್ತುಗಳ ಬೆಲೆಗಳನ್ನು ಮಾನ್ಯ ನೋಂದಣಿ ಉಪ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಸಿವಿಸಿ ಕೋಶ ಬೆಂಗಳೂರು ಇವರ ಪತ್ರ ಸಂಖ್ಯೆ ಸಿವಿಸಿ 485/2017-18 ಡಿಸೆಂಬರ್ 24 ರಂದು ನೀಡಿದ ನಿರ್ದೇಶನಗಳನ್ವಯ ಪ್ರಮುಖ ಅಂಶಗಳನ್ನು ಮಾರ್ಗಸೂಚಿ ಬೆಲೆ ಪಟ್ಟಿಯಲ್ಲಿ ಅಳವಡಿಸಲಾಗಿರುತ್ತದೆ.

ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಆಕ್ಷೇಪಣೆಗಾಗಿ ಉಪ ನೋಂದಣಿ ಕಛೇರಿಯಲ್ಲಿ ಪ್ರಚುರಪಡಿಸಲಾಗಿದೆ ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸದಸ್ಯ ಕಾರ್ಯದರ್ಶಿ ಉಪ ನೋಂದಣಿ ಅಧಿಕಾರಿ ಮುರಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವ್ಯಕ್ತಿ ನಾಪತ್ತೆ

ಬೆಳಗಾವಿ ಡಿ.7: ಜೇಡಗಲ್ಲಿ ನಿವಾಸಿಯಾದ (ಶಹಾಪುರ) ಮನೋಹರ ಗಂಟಪ್ಪಾ ಪಾಡಾ ಎಂಬ ವ್ಯಕ್ತಿ ಸೆಪ್ಟೆಂಬರ್ 9 ರ ರಾತ್ರಿ 9:30 ಗಂಟೆಗೆ ಇಲ್ಲಿಯೇ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ ಈ ಕುರಿತು ಶಹಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೋಹರ ಗಂಟಪ್ಪಾ ಪಾಡಾ ವಯಸ್ಸು (47) ವರ್ಷ ಕೋಲು ಮುಖ, ನೆಟ್ಟನೆ ಮೂಗು, ಗೋದಿಗೆಂಪು ಮೈಬಣ್ಣ, ಸಧೃಢ ಮೈಕಟ್ಟು ಹೊಂದಿರುತ್ತಾರೆ. ಬಲಗೈ ಮುಂಗೈ ಮೇಲೆ ಓಂ ಅಂತ ಟ್ಯಾಟೋ ಇರುತ್ತದೆ. ನೀಲಿ ಬಣ್ಣದ ಚೆಕ್ಸ್ ಲೈನಿಂಗ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಇದೆ ಮತ್ತು ಕನ್ನಡಕ ಧರಿಸುತ್ತಾರೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.

ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಶಹಾಪೂರ ಪೋಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಇವರ ದೂರವಾಣಿ ಸಂಖ್ಯೆ : 0831-2405244 ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ ಸಕಾಲ ಸಪ್ತಾಹ

ಬೆಳಗಾವಿ ಡಿ.7  : ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿದ ಬಾಕಿ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲು ಡಿಸೆಂಬರ್ 07 ರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಕಾಲ ಸಪ್ತಾಹವನ್ನು ಆಚರಿಸಲಾಗುವುದೆಂದು ತಿಳಿಸಿದ್ದಾರೆ.

ಸಪ್ತಾಹದಲ್ಲಿ ಹೊಸದಾಗಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೂಢೀಕರಿಸಲು ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಕಾಲ ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗುವುದು.

ಸರ್ಕಾರದ ಸೇವೆಗಳನ್ನು ವಿಳಂಬವಿಲ್ಲದೆ, ಕಾಲಮಿತಿಯೊಳಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2012ರಲ್ಲಿ ಜಾರಿಗೆ ತರಲಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಕಾಲ ಯೋಜನೆಯಡಿ ಒಟ್ಟು 17 ನಾಗರೀಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////