ಗೌಳಿ ಸಮಾಜದಿಂದ ಪ್ರತಿವರ್ಷದಂತೆ ಈ ಬಾರಿಯೂ ಎಮ್ಮೆಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

0

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ಭಾನುವಾರ ಸ್ವಯಂಭು ಗೌಳಿ ಸಮಾಜದಿಂದ ಪ್ರತಿವರ್ಷದಂತೆ ಈ ಬಾರಿಯೂ ಎಮ್ಮೆಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೌಳಿಗರ ನೂರಾರು ಎಮ್ಮೆಗಳು ಪಾಲ್ಗೊಂಡಿದ್ದವು.

ಸ್ಪರ್ಧೆಗೆ ಚಾಲನೆ ನೀಡಿದ ಬೆಳಗಾವಿ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಧನಂಜಯ ಜಾಧವ್ ಮಾತನಾಡಿ, ಎಮ್ಮೆಗಳ ಓಟದ ಸ್ಪರ್ಧೆಯೂ ಗೌಳಿ ಸಮಾಜದೊಂದಿಗೆ ಸಮ್ಮಿಳಿತಗೊಂಡಿದೆ. ಅಲ್ಲದೆ, ಎಮ್ಮೆಗಳ ಈ ಸ್ಪರ್ಧೆಗೆ ನೂರಾರು ವರ್ಷಗಳ ಇತಿಹಾಸ ಇದೆ.

ಈ ಪರಂಪರೆ ಮನೋರಂಜನೆಯ ಜತೆಗೆ ಪ್ರಾಣಿ ಪ್ರೀತಿಗೂ ಸಹ ಸಾಕ್ಷಿಯಾಗಿದ್ದು, ಇದು ಅನುಕರಣೀಯ ಎಂದರು.