ಸೌಹಾರ್ದಯುತ ಮಾತುಕತೆ ನಡೆಸಿದರು

0

ಬೆಂಗಳೂರು:    ವಿಧಾನ ಮಂಡಲ ಅಧಿವೇಶನ   ಆರಂಭವಾದ  ಮೊದಲ ದಿನ   ಗುರು- ಶಿಷ್ಯರು  ಮುಖಾಮುಖಿಯಾಗಿದ್ದು, ಸೌಹಾರ್ದಯುತ ಮಾತುಕತೆ ನಡೆಸಿದರು.  ಸಿದ್ದರಾಮಯ್ಯ ಮತ್ತು ಮುನಿರತ್ನ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯುತ್ತ ಕೆಲಕಾಲ ಚರ್ಚೆ ನಡೆಸಿದ್ದು,  ಎಲ್ಲರ ಗಮನ ಸೆಳೆದರು.

ಸಿದ್ದರಾಮಯ್ಯ ಅವರು, ಕಾಫಿ ಕುಡಿಯಲು ಕ್ಯಾಂಟೀನ್ ತೆರಳಿದ್ದಾಗ ಶಾಸಕ ಮುನಿರತ್ನ ಕೂಡ ಆಗಮಿಸಿದ್ದರು.  ಈ ವೇಳೆ ಸಿದ್ದರಾಮಯ್ಯ ಅವರನ್ನು ಕಂಡ ಕೂಡಲೇ  ನಮ್ಮ ದೇವರಿಗೆ ಸಮಸ್ತೆ  ಅಂತಾ ಮುನಿರತ್ನ ಗೌರವ ಸೂಚಿಸಿದರು.

 

ತಮ್ಮ ಪಕ್ಕದಲ್ಲಿಯೇ ಮುನಿರತ್ನ ಅವರನ್ನು ಕೂರಿಸಿಕೊಂಡ ಸಿದ್ದರಾಮಯ್ಯ ಕುಶಲೋಪರಿ  ವಿಚಾರಿಸಿದರು, ಅಲ್ಲದೇ   ಏನಪ್ಪ ಮಂತ್ರಿಯಾವಾಗ ಆಗೋದು ಅಂತಾ ಕೇಳಿದ್ರು.

ಇದಕ್ಕೆ  ಪ್ರತಿಕ್ರಿಯಿಸಿದ ಮುನಿರತ್ನ,  ಮುಖ್ಯಮಂತ್ರಿಗಳು  ಮಾಡಿದಾಗ ಅಂದ್ರು.

 

ಮಾತು ಮುಂದುವರೆಸಿದ ಸಿದ್ದರಾಮಯ್ಯ,  ನಿನಗೆ ಬೇಗ ಮಂತ್ರಿ ಆಗಬೇಕು ಅಂತ ಆಸೆ ಇಲ್ವೇ? ಎಂದು ಪ್ರಶ್ನಿಸಿದ್ರು.

ಅದು ಯಡಿಯೂರಪ್ಪ ಕೃಪೆ ತೋರಿಸಿದ್ರೆ ಆಗುತ್ತೆ ಸರ್. ಸದ್ಯ ನಾನು ಶಾಸಕನಾಗಿ ಕೆಲಸ ಮಾಡ್ತೀನಿ. ನನ್ನ ಜೀವನದ ಅಕೌಂಟ್​ನಲ್ಲಿ ಮಿನಿಸ್ಟರ್ ಆಗಬೇಕು ಅಂತ ಬರೆದಿದ್ರೆ ಲಾಕ್ ಒಪನ್ ಆಗುತ್ತೆ. ನಾನು ಮಾಡಿ ಅಂತ ಒತ್ತಾಯ ಮಾಡಲ್ಲ ಅಂತಾ ಮುನಿರತ್ನಾ ಹೇಳಿದರು.

ಸೋಮಶೇಖರ್, ಬೈರತಿ ಆಗಿದ್ದಾರೆ ನೀನು ಬೇಗ ಆಗು ಅಂತಾ ಸಿದ್ದರಾಮಯ್ಯ ಹೇಳಿದರು.

 

ಗುರು-ಶಿಷ್ಯರ ಮಾತುಕತೆ ವೇಳೆ ಯು.ಟಿ. ಖಾದರ್, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ, ಈಶ್ವರ್ ಖಂಡ್ರೆ ಕೂಡ ಉಪಸ್ಥಿತರಿದ್ದರು.