9 ಲಕ್ಷ ರೈತರು ರಾಷ್ಟ್ರಪತಿಗೆ ಪೋಸ್ಟ್ ಕಾ ರ್ಡ್ ಕಳುಹಿಸಿದ್ದು, ಇದರ ಮೂಲಕ ಭಾರತ ಬಂದ್ ಗೆ ಹಾಗೂ ರೈತರ ಹೋರಾಟಕ್ಕೆ ಬೆಂಬಲ

0

ಬೆಂಗಳೂರು, ಡಿಸೆಂಬರ್ 08: ಒಟ್ಟು 9 ಲಕ್ಷ ರೈತರು ರಾಷ್ಟ್ರಪತಿಗೆ ಪೋಸ್ಟ್ ಕಾ ರ್ಡ್ ಕಳುಹಿಸಿದ್ದು, ಇದರ ಮೂಲಕ ಭಾರತ ಬಂದ್ ಗೆ ಹಾಗೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

9 ಲಕ್ಷ ರೈತರಿಂದ ಸಹಿ ಹಾಕಲಾದ ಪೊಸ್ಟ್ ಕಾರ್ಡ್ ನಲ್ಲಿ ಏನಿತ್ತು?
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ಕರಾಳ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಹಿ ಸಂಗ್ರಹ’ ಅಭಿಯಾನದಲ್ಲಿ, ರಾಜ್ಯದ ವಿವಿಧ ಮೂಲೆಗಳ ರೈತರಿಂದ ಸಂಗ್ರಹಿಸಲಾದ

ಸಹಿ ಪತ್ರಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷರಾದ ಸಚಿನ್ ಮಿಗಾ ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹಸ್ತಾಂತರಿಸಿದರು.

ಡಿ.ಕೆ.ಶಿವಕುಮಾರ್, ಪೋಸ್ಟ್ ಕಾರ್ಡ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಪತಿಗೆ ತಲುಪಿಸಲಿದ್ದಾರೆ. ಎಪಿಎಂಸಿ, ಕಾರ್ಮಿಕ ಕಾಯ್ದೆ ಹಾಗೂ ಭೂ.ಸುಧಾರಣೆ ಕಾಯ್ದೆ ರದ್ದು ಪಡಿಸುವಂತೆ ಸಹಿ ಸಂಗ್ರಹ ಮಾಡಲಾಗಿದೆ ಎಂದರು