ಯೋಧ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಯೋಧನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

0

ಹುಬ್ಬಳ್ಳಿ : ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಯೂನಿಫಾರ್ಮ್ಮೇಲೆ  ಪ್ರತಿಭಟನೆಗೆ ಕುಳಿತಿದ್ದ  ಯೋಧನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

 

ರೈತರು ಭಾರತ್ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ವೇಳೆ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಬರದ್ವಾಡ ಗ್ರಾಮದ ರಮೇಶ ಮಾಡಳ್ಳಿ ಎಂಬ ಯೋಧ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

 

ಯೂನಿಫಾರ್ಮ್ಮೇನಲ್ಲೇ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿ, ಕೆಲ ಹೊತ್ತು ಧರಣಿ ಕುಳಿತರು. ಈ ವೇಳೆ ಪೊಲೀಸರು ಧರಣಿ ಕುಳಿತ ಯೋಧನನ್ನು ಪೊಲೀಸರು ವಿಚಾರಿಸಿದರು. ಬಳಿಕ ತಮ್ಮ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು.

 

ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಯೋಧ ರಮೇಶ ಅವರನ್ನು ಕರೆದುಕೊಂಡು ಹೋದ ಪೊಲೀಸರು. ಸುಮಾರು 2 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕುಡಿಸಿಕೊಂಡಿದ್ದರು.

 

ಅನ್ನದಾತನ ಪರವಾಗಿ ಯೋಧ ನಿಂತಿರುವುದು ತಪ್ಪೇ ಎಂದು ರೈತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ