ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

0

ಬೆಳಗಾವಿ, ಡಿ.8: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಡಿಸೆಂಬರ್ 19 ರಂದು ಬೆಳಿಗ್ಗೆ 11.30 ಗಂಟೆಗೆ ವಿಡಿಯೋ ಕಾನ್ಪರೇನ್ಸ್ ಅಥವಾ ವರ್ಚುವಲ್ ಮೀಟಿಂಗ್ ಮೂಲಕ ಜರುಗಿಸಲಾಗುವುದೆಂದು ಎಂದು ಸಹಕಾರಿ ಹಾಲು ಉತ್ಪಾದಕರ ಸಂಘಗಳ ವ್ಯವಸ್ಥಾಪಕ ನಿರ್ದೇಶಕರಾದ ಉಬೇದುಲ್ಲಾ ಖಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 06 ರಂದು ಜರುಗಿದ ಒಕ್ಕೂಟದ ಅಧ್ಯಕ್ಷರಾದ ವಿವೇಕ ವಸಂತರಾವ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೀಟಿಂಗ್ ಮೂಲಕ ಜರುಗಿಸಲು ತೀರ್ಮಾನವಾಗಿರುತ್ತದೆ. ತತ್ಸಂಬಂಧ ಒಕ್ಕೂಟದ ಸದಸ್ಯ ಸಂಘಗಳಿಗೆ ಒಕ್ಕೂಟದ ವತಿಯಿಂದ ಲಾಗ್‍ಇನ್ ಐ.ಡಿ ಮತ್ತು ಪಾಸ್‍ವರ್ಡ್ ನೀಡಲಾಗುವುದು.

ಲಾಗ್‍ಇನ್ ಐ.ಡಿ ಮತ್ತು ಪಾಸ್‍ವರ್ಡ್ ಉಪಯೋಗಿಸಿಕೊಂಡು ಒಕ್ಕೂಟದ ಸದಸ್ಯ ಸಂಘಗಳು ಸಭೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮಿತಿ ಪ್ರಕಟಣೆ
ಬೆಳಗಾವಿ, ಡಿ.8(ಕರ್ನಾಟಕ ವಾರ್ತೆ): ಸವದತ್ತಿ ತಾಲೂಕಿನ ವ್ಯಾಪ್ತಿಯ ಮರಕುಂಬಿ ಗ್ರಾಮದ ರಿ.ಸ.ನಂ.166 ನೇದ್ದರ ಹೊಸಬಡಾವಣೆಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಸವದತ್ತಿ ತಾಲೂಕು ಉಸಮಿತಿಯ ಕೇಂದ್ರ ಮೌಲ್ಯ ಮಾಪನ ಸಮಿತಿಯು ನೀಡಿರುವ

ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಮುದ್ರಾಂಕ (ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮೀತಿ ಪ್ರಕಟಣೆ, ಮಾರುಕಟ್ಟೆ ಮೌಲ್ಯಗಳ ಪರಿಷ್ಕರಣೆ) ನಿಯಮಗಳು 2003 ರನ್ವಯ ಪ್ರಚುರಪಡಿಸಿ ಆಕ್ಷೇಪಣೆ ಮಾಡಿದ್ದಾರೆ.

ಕರ್ನಾಟಕ ಮುದ್ರಾಂಕ (ಸ್ವತ್ತುಗಳ ಮಾರ್ಗಸೂಚಿ ಮಾರುಕಟ್ಟೆ ಮಾರುಕಟ್ಟೆ ಬೆಲೆಗಳನ್ನು ಅಂದಾಜು ಮಾಡುವ, ಪರಿಷ್ಕರಿಸುವ) ನಿಯಮಗಳು 2003ರ ನಿಯಮ 4 ರನ್ವಯ ಉಪಲಬ್ಧವಿರುವ ಅಧಿಕಾರದನ್ವಯ ಸ್ವತ್ತುಗಳ ಬೆಲೆಗಳನ್ನು ಮಾನ್ಯ ನೋಂದಣಿÀ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಸಿವಿಸಿ ಕೋಶ ಬೆಂಗಳೂರು ಇವರ ಪತ್ರ ಸಂಖ್ಯೆ ನೋ&ಮು/ಸಿವಿಸಿ/157/2020-21 ನವ್ಹೆಂಬರ್ 27 ರಂದು ನೀಡಿದ ನಿರ್ದೇಶನಗಳನ್ವಯ ಪ್ರಮುಖ ಗುಂಜಲಾರಕೊಪ್ಪ ಗ್ರಾಮದ ಭೂಸ್ವಾಧೀನಕ್ಕೊಳಪಡದ ಸಾಗುವಳಿ ಜಮೀನುಗಳ

ಸರ್ವೇ ನಂ: 88/2, 89/1, 90/ಬ, 91/2 ಸದರಿ ಸರ್ವೇ ನಂಬರುಗಳಿಗೆ ಮಾತ್ರ ಅನ್ವಯಿಸುವಂತೆ ಹೊಸ ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಆಕ್ಷೇಪಣೆಗಾಗಿ ಉಪ ನೋಂದಣಿ ಕಛೇರಿಯಲ್ಲಿ ಪ್ರಚುರಪಡಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸದಸ್ಯ ಕಾರ್ಯದರ್ಶಿ ಉಪ ನೋಂದಣಿ ಅಧಿಕಾರಿ ಸವದತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.