ಬೆಂಗಳೂರು, ಡಿ. 9- ವಿಧಾನಸಭಾ ಅಧಿವೇಶನ ಗುರುವಾರ ಅಂತ್ಯಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಸದನ ಕಲಾಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಅಧಿವೇಶನ ಅವಧಿ ಮೊಟಕು ಗೊಳಿಸಲು ನಿರ್ಧರಿಸಲಾಗಿದೆ.
ಒಂದು ದೇಶ ಒಂದು ಚುನಾವಣೆ ಕುರಿತ ಚರ್ಚೆ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ತೀರ್ಮಾನ ಮಾಡಲಾಗಿದೆ. ಗೋಹತ್ಯೆ ತಡೆ ಮಸೂದೆ ಮಂಡನೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಮಸೂದೆ ಮಂಡಿಸುತ್ತೇವೆ, ಯಾವುದೆಲ್ಲ ಮಸೂದೆಗಳು ಬರುತ್ತೆ ಅಂತ ನಾಳೆ ನಾಡಿದ್ದು ಗೊತ್ತಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
Recover your password.
A password will be e-mailed to you.