ನೇಕಾರರು ಸಂಕಕಷ್ಟದಲ್ಲಿದ್ದಾರೆ,ನೇಕಾರರು ಸಿದ್ಧಪಡಿಸಿದ ಸೀರೆಗಳನ್ನು ಸರ್ಕಾರ ಖರೀಧಿ ಮಾಡಬೇಕೆಂದು ಅಧಿವೇಶನದಲ್ಲಿ ಶಾಸಕ ಅಭಯ ಪಾಟೀಲ ಸಿದ್ಧು
ಬೆಳಗಾವಿ-ನೇಕಾರರು ಸಂಕಕಷ್ಟದಲ್ಲಿದ್ದಾರೆ,ನೇಕಾರರು ಸಿದ್ಧಪಡಿಸಿದ ಸೀರೆಗಳನ್ನು ಸರ್ಕಾರ ಖರೀಧಿ ಮಾಡಬೇಕೆಂದು ಅಧಿವೇಶನದಲ್ಲಿ ಶಾಸಕ ಅಭಯ ಪಾಟೀಲ ಸಿದ್ಧು ಸವದಿ,ಮಹಾದೇವಪ್ಪಾ ಯಾದವಾಡ ಸರ್ಕಾರದ ಗಮನ ಸೆಳೆದರು.
ಶಾಸಕ ಅಭಯ ಪಾಟೀಲ ಮಾತನಾಡಿ,ನನ್ನ ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಸಂಕಷ್ಟದಲ್ಲಿರುವ ಬಹಳಷ್ಟು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನೇಕಾರರ ಸೀರೆ ಖರೀಧಿ ಮಾಡುವ ಕುರಿತು ಅನೇಕ ಬಾರಿ ನಿಯೋಗ ತಂದು ಮುಖ್ಯಮಂತ್ರಿಗಳಿಗೆ ಮನವಿ
ಮಾಡಿಕೊಂಡಿದ್ದೇವೆ.ಕಾರಣಾಂತರಗಳಿಂದ ಸೀರೆ ಖರೀಧಿಗೆ ಚಾಲನೆ ಸಿಕ್ಕಿಲ್ಲ ,ಸರ್ಕಾರ ಆದಷ್ಟು ಬೇಗನೆ ನೇಕಾರರ ಸೀರೆ ಖರೀಧಿ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ ನೇಕಾರರು ಮತ್ತಷ್ಟು ಸಂಕಷ್ಟಕ್ಕೊಳಗಾಗ ಬಾರದು ಎಂದು ಶಾಸಕ ಅಭಯ ಪಾಟೀಲ ಸರ್ಕಾರದ ಗಮನ ಸೆಳೆದರು.
ಶಾಸಕ ಸಿದ್ದು ಸವದಿ ಮಾತನಾಡಿ,ಸರ್ಕಾರ ನೇಕಾರ ಸಮ್ಮಾನ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ನೇಕಾರನಿಗೆ ತಿಂಗಳಿಗೆ ಎರಡು ಸಾವಿರ ರೂ ಕೊಟ್ಟಿದೆ.ಇದು ಸ್ವಲ್ಪ ಮಟ್ಟಿಗೆ ನೇಕಾರರಿಗೆ ಸಹಾಯ ಆಗಿದೆ ,ಸರ್ಕಾರ ನೇಕಾರರ ಸೀರೆ ಗಳನ್ನು ಖರೀಧಿ
ಮಾಡಿದ್ರೆ,ನೇಕಾರರ ಸಂಕಷ್ಟ ನಿವಾರಣೆ ಆಗಲು ಸಾಧ್ಯ ಎಂದರು ಇದಕ್ಕೆ,ಶಾಸಕ ಮಹಾದೇವಪ್ಪ ಯಾದವಾಡ ಧ್ವನಿಗೂಡಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವೆ ಶಶಿಕಲಾ ಜೊಲ್ಲೆ,ನೇಕಾರರ ಸೀರೆ ಖರೀಧಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿದ್ದೇವೆ
,36 ಕೋಟಿ ರೂ ವೆಚ್ಚದಲ್ಲಿ 6 ಲಕ್ಷ ಸೀರೆ ಖರೀಧಿ ಮಾಡುವ ಪ್ರಸ್ತಾವನೆ ಇದೆ.ಮುಖ್ಯಮಂತ್ರಿಗಳ ಜೊತೆ ಇನ್ನೊಂದು ಬಾರಿ ಚರ್ಚಿನ ಕ್ರಮ ಕೈಗೊಳ್ಳುತ್ತೇನೆ ಎಂದಾಗ, ಮೇಡಂ ಸೀರೆ ಖರೀಧಿ ಮಾಡ್ತೀವಿ ಅಂತಾ ಹೇಳಿ ಎಂದಾಗ,ಈ ಬಗ್ಗೆ ಪರಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಉತ್ತರಕ್ಕೆ ವಿರಾಮ ನೀಡಿದ್ರು…