ಇ-ಸ್ಕಾಲರ್‍ಶಿಪ್ ಯೋಜನೆಯಡಿ ವಿಕಲಚೇತನರಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

0

ಬೆಳಗಾವಿ, ಡಿ.10: ಕೇಂದ್ರ ಸರ್ಕಾರದ ಇ-ಸ್ಕಾಲರ್‍ಶಿಫ್ ಯೋಜನೆಯಡಿ ಪ್ರೀಮ್ಯಾಟ್ರಿಕ್, ಪೋಸ್ಟ್‍ಮೆಟ್ರಿಕ್ ಹಾಗೂ ಟಾಪ್‍ಕ್ಲಾಸ್ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ 2020-21 ನೇ ಸಾಲಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಇ- Scholarship Portal ನಲ್ಲಿ ಆನ್‍ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಮುಖಾಂತರ ಸದರಿ ಯೋಜನೆಯ www.scholarship.gov.in ನಲ್ಲಿ ಆನ್‍ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಡಿಸೆಂಬರ್ 31 ಅಂತಿಮ ದಿನಾಂಕವಾಗಿದೆ.
ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಕಲಚೇತನರು ಈ ಸೌಲಭ್ಯವನ್ನು ಪಡೆದು ಉನ್ನತ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿ, ಮ್ಯಾನುವೆಲ್ ದ್ವಿಪ್ರತಿ ಅರ್ಜಿಗಳನ್ನು ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂ ವಿ.ಆರ್.ಡಬ್ಲಯೂ ಹಾಗೂ ಯು.ಆರ್.ಡಬ್ಲಯೂ ಇವರ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ www.disabilityaffairs.gov.inಸಂಪರ್ಕಿಸಬಹುದಾಗಿದೆ.